tag:blogger.com,1999:blog-4790106144508237634.post5267028849755200110..comments2019-04-21T04:32:55.018-07:00Comments on ಮನಸಾರೆ: ಅವನಿಗೊಂದು ಪತ್ರ ( ಪ್ಲೀಸ್ ನೀವೇ ಹೇಳಿ ನಾನು ಏನು ಮಾಡಬೇಕೆಂದು )Manasaarehttp://www.blogger.com/profile/06846364488667308472noreply@blogger.comBlogger40125tag:blogger.com,1999:blog-4790106144508237634.post-4787649535804047432019-04-21T04:32:55.018-07:002019-04-21T04:32:55.018-07:00ಸೂಪರ್ ಸೂಪರ್ ಬರವಣಿಗೆ ನಿಮ್ಮದು ಅದ್ದುತವಾದ ಪ್ರೇಮ ಕವನ ಬ...ಸೂಪರ್ ಸೂಪರ್ ಬರವಣಿಗೆ ನಿಮ್ಮದು ಅದ್ದುತವಾದ ಪ್ರೇಮ ಕವನ ಬರವಣಿಗೆಯ ವಿಷಯ ಒಳ್ಳೆಯ ಕನ್ನಡ ಸಾಹಿತ್ಯ ತೇರು ಎಳೆಯುವ ಸುಂದರ ಕವಿಗಳಲ್ಲಿ ನಿವು ಒಬ್ಬರು...
Anonymoushttps://www.blogger.com/profile/15950840507588331620noreply@blogger.comtag:blogger.com,1999:blog-4790106144508237634.post-1772906863857202232019-04-21T04:28:14.013-07:002019-04-21T04:28:14.013-07:00ರಪೀಕನದು ನಿಜವಾದ ಪ್ರೀತಿ ಪ್ರೇಮ ಅಲ್ಲ ಸಂದರ್ಭಕ್ಕೆ ತಕ್ಕಂತ...ರಪೀಕನದು ನಿಜವಾದ ಪ್ರೀತಿ ಪ್ರೇಮ ಅಲ್ಲ ಸಂದರ್ಭಕ್ಕೆ ತಕ್ಕಂತೆ ಬದಲಾಗುವನು ಅವನು ಮದುವೆಯಾದ ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ಯಾವುದಾದರೂ ನಂಬಿಕೆ ಇದೆ ? ತನ್ನ ಕಾಮದಾಹ ಯೌವನದದಾಹ ತೀರಿಕೊಂಡ ಅಶಳಿಗೆ ಅವನು ಕೈ ಕೊಟ್ಟುರೆ ಅವಳ ಬದುಕು ಬಿರುಗಾಳಿ ಸಿಕ್ಕ ಗಾಳಿ ಪಟ..ಅದಕ್ಕಾಗಿಯೋ... ಹಿರಿಯರು ಹೇಳುತ್ತಾರೆ "ಪಾಲಿಗೆ ಬಂದಿದ್ದು ಪಂಚಾಮೃತ"... ಬರವಣಿಗೆ ಸೂಪರ್ ಸೂಪರ್ ಸೂಪರ್Anonymoushttps://www.blogger.com/profile/15950840507588331620noreply@blogger.comtag:blogger.com,1999:blog-4790106144508237634.post-839131984626771342010-09-05T08:47:27.625-07:002010-09-05T08:47:27.625-07:00ಹಾಯ್ ಮನಸಾರೆಅವರೆ,
ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಅಪ್ಡೇಟ್...ಹಾಯ್ ಮನಸಾರೆಅವರೆ,
ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಅಪ್ಡೇಟ್ ಆಗ್ಲೇ ಇಲ್ಲ.. ತುಮ್ಬನೆ ಬ್ಯುಸಿ ಅಂತ ಕಾಣುತ್ತೆ..
ನಿಮ್ಮ ಗೆಳತಿ ಹೇಗಿದ್ದಾರೆ ಈಗ ಎಂಬುದನ್ನ ತಿಳಿಸಿ..Anonymousnoreply@blogger.comtag:blogger.com,1999:blog-4790106144508237634.post-29531273930769458212010-04-03T11:51:42.898-07:002010-04-03T11:51:42.898-07:00ಮನದಿಂಚರ ಅವರೇ ,
ನಿಮ್ಮ ಕಾಮೆಂಟ್ಸ್ ಗಳಿಗೆ ಹಾಗೂ ಅದಕ್ಕ...ಮನದಿಂಚರ ಅವರೇ ,
ನಿಮ್ಮ ಕಾಮೆಂಟ್ಸ್ ಗಳಿಗೆ ಹಾಗೂ ಅದಕ್ಕೆ ಕೊಟ್ಟ ನಿಮ್ಮ ಸಮಯ , ವಿಚಾರಗಳಿಗೆ ಹೃತ್ಪೂರ್ವಕ್ ಕೃತಜ್ಞತೆಗಳು . ನಿಜ ಹೇಳಲಾ ಅವಳ ಪರಿಸ್ಥಿತಿ ನಂಗೆ ಇನ್ನಸ್ಟು ಅರ್ಥ ಮಾಡಿಸಿದಿರಿ . ಅಬ್ಬಾ ! ಪುಸ್ತಕ ಹುಳು ಸೋಡಾ ಗ್ಲಾಸಿನ ದಾಸಯ್ಯ ನ ಜೊತೆ ನನ್ನ ಮದುವೆ ಆಗಿದ್ದರೆ ಅಂತ ಒಂದು ಕ್ಷಣ ಯೋಚಿಸಿದರೆ ನಿಜವಾಗಲು ಮೈ ಜುಮ್ ಅನ್ನಿಸಿತು , ಅದರ ಜೊತೆ ಆ ಪರಿಸ್ಥಿತಿ ನೆನಪಿಸಿ ಕೊಂಡು ಸ್ವಲ್ಪ ನಗುನು ಬಂತು . ನಾನೇನು ಮಾಡ್ತಾ ಇದ್ದೆ ಅನ್ನೋದಕ್ಕೆ ಉತ್ತರ ಸಿಗಲಿಲ್ಲ .
ನೀವು ಹೇಳಿರೋದು ನೂರಕ್ಕೆ ನೂರು ಸತ್ಯ . ನನ್ನಿಂದ ಅವಳಿಗೆ ಬರಿ ಸಾಂತ್ವನ , ಸಲಹೆ ಮತ್ತೆ ಹಾರೈಕೆ ಸಿಗಬಹುದು ಆದ್ರೆ ಆವಳು ಮಿಸ್ ಮಾಡಿಕೊಂಡಿರೋದು , ಹಾಗೂ ಮಾಡಿಕೊಳ್ಳುತಿರೋದು ಕೊಡಲಿಕ್ಕೆ ಆಗೋಲ್ಲ . ಅದು ನಂಗೆ ಸಂಪೂರ್ಣ ಅರ್ಥ ಆಗಿದೆ . ಆದ್ರೆ ನಾನೇನು ಮಾಡ್ಲಿಕ್ಕೆ ಸಾದ್ಯನ ಅದನ್ನಾದರೂ ಮಾಡೋಣ ಅಂತ .
ಇನ್ನು ಗಂಡನ ಹೆಂಡತಿಯ ನಡುವೆ ಇರಬೇಕಾಗದ ರಸಿಕತೆ , chemistry , ಲವ್ ಇಲ್ಲವಾದರೆ ಆ ಜೀವನ ಪರ್ಯಂತ ನರಕ ಅಂತು ಖಂಡಿತ . ಗಂಡ ಹೆಂಡತಿ ಯಾಕೆ , chemistry ಇಲ್ಲ ಅಂದ್ರೆ ಒಂದು ಒಳ್ಳೆ ಗೆಳೆತನವೆ ಸಾದ್ಯ ಇಲ್ಲ . ಗೆಳಯರ/ಗೆಳತಿಯರ ನಡುವೆನು ಒಂದು chemistry ಬೇಕಾಗುತ್ತೆ ಆವಾಗಲೇ ಒಂದು comfort ಲೆವೆಲ್ ಸೆಟ್ ಆಗುತ್ತೆ . ನಿಜ ಇದೆಲ್ಲ ಇರದೇ ಬಾಳೋದು ಕಷ್ಟ ಕರ . ಇದರಲ್ಲಿ ಅವಳು ಎಷ್ಟು ಅಸಹಾಯಕಳೋ , ನಾನು ಅಸ್ಟೆ. ಈಗ ಇವೆಲ್ಲ ಅವಳಿಗೆ ಹೇಗೆ ಕೊಡಲು ಸಾದ್ಯ ?
ಇನ್ನು ನೀವು ಕೊಟ್ಟಿರುವ ಸಲಹೆಗಳು ತುಂಬಾ ಸೂಕ್ತ , ಆದ್ರೆ ಸ್ವಲ್ಪ ಕಷ್ಟ . ನಾನಿರೋದು ಬೆಂಗಳೂರಿನಲ್ಲಿ , ಅವಳಿರೋದು ಹುಬ್ಬಳಿಯಲ್ಲಿ , ಅವಳನ್ನ ಇನ್ person ಆಗಿ ಭೆಟ್ಟಿ ಆಗಬೇಕೆಂದರೆ ೧೨ ಗಂಟೆಗಳ ಪ್ರಯಾಣ ಮಾಡ್ಬೇಕು .
ವಾರಕೊಮ್ಮೆ ಅಲ್ಲ ತಿಂಗಳಿಗೊಮ್ಮೆನು ಸಾಧ್ಯ ಇಲ್ಲ . ನಂಗೆ ನನ್ನದೆ ಆದ ಜವಾಬ್ದಾರಿಗಳಿವೆ , ನನ್ನ ಮಗನ ಸ್ಕೂಲ್ , ನನ್ನ ಆಫೀಸ್ ಇತ್ಯಾದಿ . ಅವಳು ಅಲ್ಲೇ ಯಾರದ್ರುನು ಗೆಳತಿ ಮಾಡಿ ಕೊಳ್ಳಲಿಕ್ಕೆ ಸಾಧ್ಯನಾ ? ಇತ್ತೀಚಿಗೆ ಪರಿಚಯವಾದ ಗೆಳತಿಗೆ ಇಂತ ಸೂಕ್ಷ್ಮ ವಿಷಯಗಳನ್ನು ಹೇಳೋ ಧೈರ್ಯಾನು ಬರೋಲ್ಲ ಅಲ್ವಾ . ಇನ್ನು ಬ್ಲಾಗಿಂಗ್ ಹಾಗೂ ಬ್ಲಾಗ್ ಫ್ರೆನ್ಸ್ ಒಂದು ಒಳ್ಳೆ ಯೋಚನೆ . ಇಲ್ಲಿ ನಮ್ಮ ಮನಸಿನ ಭಾವನೆಗಳನ್ನ ಮುಕ್ತವಾಗಿ ವ್ಯಕ್ತ ಪಡಿಸಬಹುದು , ಅದರಂತೆ ನಿಮ್ಮ ಅಂತ ಒಳ್ಳೆ ಬ್ಲಾಗ್ ಫ್ರೆನ್ಸ್ ಮಾಡಿಕೊಳ್ಳಬಹುದು . ನೀವು ಹೇಳಿದ ಹಾಗೆ ನನ್ನ ಗೆಳತಿಗೆ ಕೂಡ ಹೊಸ ಹೊಸ ಉತ್ಸಾಹದ ಮೊಳಕೆಯೊಡೆದು, ಸುಂದರ ಭಾವನೆಗಳನ್ನ ಹಂಚಿಕೊಳ್ಳಲು ಹೊಸ ಮಾರ್ಗ ಸೃಷ್ಟಿಯಾಗಬಹುದು . ಆದ್ರೆ ಇದು ಕಷ್ಟ ನೆ . ನಾನು ಹೇಳಿರೋ ಹಾಗೆ ಅವಳಿಗೆ ಮನೇಲಿ ಒಂದು ಕಂಪ್ಯೂಟರ್ ತೊಂಗೊಂಡು, ಅದಕ್ಕೆ ನೆಟ್ ಹಾಕಿಸಿ ,ಬ್ಲಾಗಿಂಗ್ ಚಾಟಿಂಗ್ ಮಾಡೋವಸ್ತು ಸ್ವಾತಂತ್ರ್ಯನು ಇಲ್ಲ , ಅವಳಿಗೆ ಕಂಪ್ಯೂಟರ್ ಬಗ್ಗೆ ಮಾಹಿತಿನು ಇಲ್ಲ . ಅವಳು ಓದಿರೋದು ಪಿ . ಯು .ಸಿ 1st ಇಯರ್ ಮಾತ್ರ . ಆಮೇಲೆ ಪ್ರತಿ ತಿಂಗಳು ಇಂಟರ್ನೆಟ್ ಬಿಲ್ ಬಂದ್ರೆ ಅದನ್ನು ಕೊಡುವ ಒಬ್ಬ ಜವಾಬ್ದಾರಿ ಹಾಗೂ ಹೆಂಡತಿಯ ಭಾವನೆಗಳಿಗೆ ಸ್ಪಂದಿಸುವ ಗಂಡನು ಇಲ್ಲ . ಅವಳು ಪ್ರತಿಯೊಂದಕ್ಕೂ ಅವರ ಅತ್ತೇನೆ ಕೇಳಬೇಕು . ಆರ್ಥಿಕ ಸ್ವಾತಂತ್ರ್ಯ ಅವಳಿಗೆ ಇಲ್ಲ . ನಿಜಕ್ಕೂ ನಿಮ್ಮ ಸೂಕ್ತ ಸಲಹೆಗಳನ್ನ ನಡೆಸಿ ಕೊಡಲಿಕ್ಕೆ ಸಾದ್ಯ ಇಲ್ಲ ಅನ್ನೋದು ತುಂಬಾ ಖೇದದ ವಿಷಯ .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-44556275598550550092010-04-03T11:51:25.120-07:002010-04-03T11:51:25.120-07:00ಓ ಮನಸೇ, ನೀನೇಕೆ ಹೀಗೆ...? ಅವರೇ ನಿಮ್ಮ ಹೆಸರು ಗೊತ್ತಾಗಲ...ಓ ಮನಸೇ, ನೀನೇಕೆ ಹೀಗೆ...? ಅವರೇ ನಿಮ್ಮ ಹೆಸರು ಗೊತ್ತಾಗಲಿಲ್ಲ . ಪರವಾಗಿಲ್ಲ ಬಿಡಿ , ಹೆಸರಲ್ಲಿ ಏನಿದೆ . ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ನಿಮ್ಮ ಸೆಳೆತ ಕಥೆ ಓದಿದೆ . ಅಬ್ಬಾ ನನ್ನ ಗೆಳತಿಯ ಜೀವನಕ್ಕೆ ಎಷ್ಟು ಹತ್ತಿರದ ಲೇಖನ ಅದು . ಕೊನೆಯಲ್ಲಿ ನಾಯಕಿ ತೊಗೊಂಡಿರುವ ನಿರ್ಧಾರ ಸರಿ ಅನ್ನಿಸಿತು . ಮತ್ತೆ ಹೀಗೆ ಬರ್ತಾ ಇರಿ

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-55305582811666568592010-04-01T11:53:17.969-07:002010-04-01T11:53:17.969-07:00..cont'd
ಆದರೆ, ನಮ್ಮ conservative ಆಗಿರುವ ಸಮಾಜದಲ.....cont'd
ಆದರೆ, ನಮ್ಮ conservative ಆಗಿರುವ ಸಮಾಜದಲ್ಲಿ ಅದು ಅಷ್ಟು ಸರಿ ಅನ್ಸೋಲ್ಲ. ಎರಡನೆಯದಾಗಿ, ಆಕೆಯ ಮನೆಯಲ್ಲಿ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಳ್ಳಲು ಒತ್ತಾಯ ಮಾಡಿ. ಬ್ಲಾಗಿಂಗ್ ಜಗತ್ತಿಗೆ ಅವರನ್ನೂ ಸಹ ಪರಿಚಯಿಸಿ. ಅವರು ಕೂಡ ಸಹಸ್ರಾರು ಜನರೊಡನೆ ತಮ್ಮ ಭಾವನೆ ಹಾಗು ಅನಿಸಿಕೆಗಳನ್ನ "dissipate and share" ಮಾಡಲಿ. ನಿಮಗೆ ನಾ ಬರೆದಿರುವ ಒಂದು ಸೆಣ್ಣ comment ನಿಂದ ಎಷ್ಟೊಂದು ಖುಷಿ ಹಾಗು josh ಸಿಕ್ಕಿತು ಅಂತ ಹೇಳಿದಿರಲ್ಲವೇ? ಹಾಗೆಯೇ ನಿಮ್ಮ ಗೆಳತಿಯಲ್ಲಿಯೂ ಕೂಡ ಹೊಸ ಹೊಸ ಉತ್ಸಾಹದ ಮೊಳಕೆಯೊಡೆದು, ಸುಂದರ ಭಾವನೆಗಳನ್ನ ಹಂಚಿಕೊಳ್ಳಲು ಹೊಸ ಮಾರ್ಗ ಸೃಷ್ಟಿಯಾಗಬಹುದೆಂದು ನನ್ನ ಊಹೆ..

ನಾ ಇಷ್ಟು ಹೇಳಿದ್ದನ್ನ ಇನ್ನೂ ಘಾಡವಾಗಿ ವಿಮರ್ಶಿಸಿ ನೋಡಿ. ಪರಿಹಾರ ನಿಮ್ಮೆದುರೇ ಪ್ರತಿಬಿಂಬಿಸುತ್ತದೆ! ನಿಮ್ಮ ಗೆಳತಿಯ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ.

ಮನದಿಂಚರAnonymousnoreply@blogger.comtag:blogger.com,1999:blog-4790106144508237634.post-61590440220315353052010-04-01T11:51:55.165-07:002010-04-01T11:51:55.165-07:00cont'd..
ಈ ಎಲ್ಲ desires ಅಥವಾ ಬಯಕೆಗಳನ್ನು ತೀರಿಸಲ...cont'd..
ಈ ಎಲ್ಲ desires ಅಥವಾ ಬಯಕೆಗಳನ್ನು ತೀರಿಸಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ.. ಆದರೆ ಆಕೆಯ ಭಾವನೆಗಳನ್ನು ಹಂಚಿಕೊಳ್ಳಲು ಕೆಲ ಮಾರ್ಗಗಳನ್ನು ನೀವು ಅವರಿಗೆ ಕಂಡು ಕೊಡಬಹುದು. ಅವು ಏನೆಂದರೆ, ಮೊದಲನೆಯದಾಗಿ ಆಕೆಗೆ regular ಆಗಿ ಸಿಕ್ಕು ತನ್ನ ಮನಸ್ಸಿನೊಳಗೆ ಕುದಿಯುತ್ತಿರುವ ಭಾವನೆಗಳನ್ನ ಹೊರ ಚೆಲ್ಲಲು ಹಾಗು ಹಂಚಿಕೊಳ್ಳಲು ಅವಕಾಶ ಮಾಡಿ ಕೊಡುವಂಥಹ ಒಂದು ಗೆಳತಿ ಬೇಕಾಗಿರುತ್ತಾಳೆ. ಪ್ರತಿನಿತ್ಯ ಅಲ್ದೆ ಹೋದ್ರೂ ವಾರಕ್ಕೊಮ್ಮೆ ಬೇಟಿ ಆಗುವ ಹಾಗೆ ಇರಬೇಕು.. ನೀವಾದ್ರೆ ಬೆಂಗಳೂರಿನಲ್ಲಿ ಇರುವಿರಿ.. ಫೋನಿನಲ್ಲಿ ಮಾತನಾಡಿದರೆ, ಪ್ರತ್ಯಕ್ಷವಾಗಿರುವ ಹಾಗೆ ಭಾಸವಾಗುವುದಿಲ್ಲ.. ಯಾಕೆಂದರೆ ಮುಖಾ ಮುಖಿ ಬೇಟಿಯಾದಾಗ ಮನುಷ್ಯನ ದೇಹದಿಂದ "pheromones " ಅನ್ನೋ chemical
ಕಣಗಳು ಹೊರ ಚಿಮ್ಮುತ್ತವೆ ಹಾಗು ಅದನ್ನು ಮತ್ತೊಬ್ಬ ವ್ಯಕ್ತಿ ಸ್ವೀಕರಿಸಿದಾಗ "socialness factor" develop ಆಗುತ್ತೆ.. ಜನರು ತಿಳಿದಿರುವ ಹಾಗೆ ಇದು sexual -mate ಆಯ್ಕೆ ಮಾಡಲು ಮಾತ್ರ ಸೀಮಿತ ಅನ್ನೋದು ತಪ್ಪು ಕಲ್ಪನೆ. ಅದಕ್ಕೇ ಅಲ್ಲವೇ ನಾವು ನಮ್ಮ chemistry ಗೆ match ಆಗುವಂಥಹ ಗೆಳೆಯರ ಜೊತೆ ಸಮಯ ಕಳೆಯಲು ಇಚ್ಛೆ ಪಡ್ತೇವೆ? ಸದ್ಯ ನಿಮ್ಮ ಗೆಳತಿಯ ಸ್ಥಿತಿಯನ್ನ ಅಳಿಸಿ ಹಾಕಲು ಆಕೆಯ chemistry ಗೆ ಹೊಂದುವಂಥ ಒಂದು ಗೆಳತಿಯನ್ನ ಹುಡುಕಿ ಕೊಡಿ. ಗೆಳೆಯ ಆದ್ರೂ ಆಗಬಹುದಿತ್ತು. cont'd..Anonymousnoreply@blogger.comtag:blogger.com,1999:blog-4790106144508237634.post-29743512092314924792010-04-01T11:47:47.451-07:002010-04-01T11:47:47.451-07:00..cont'd
ನಿಮಗಾದರೆ ನಿಮಗಿಷ್ಟಕರವಾದ ಭಾವನೆಗಳನ್ನು ಹಂ.....cont'd
ನಿಮಗಾದರೆ ನಿಮಗಿಷ್ಟಕರವಾದ ಭಾವನೆಗಳನ್ನು ಹಂಚಿಕೊಳ್ಳಲು ಎಷ್ಟೊಂದು ಮಾರ್ಗಗಳಿವೆ. ಆದರೆ ನಿಮ್ಮ ಗೆಳತಿ ಇದೆಲ್ಲರಿಂದಲೂ ವಂಚಿತಗೊಂಡಿದ್ದಾರೆ ಎಂಬುದು ಕಹಿ ಸತ್ಯ ತಾನೆ? ಆಕೆಯ ಭಾವನೆಗಳನ್ನ ಸ್ಪಂದಿಸಲು, ಅಥವಾ ಹಂಚಿಕೊಳ್ಳಲು ಯಾವ ಮಾರ್ಗ ತಾನೇ ಇದೆ, ನೀವೇ ಒಮ್ಮೆ ಯೋಚಿಸಿ ನೋಡೋಣ? ಮನೆಯಲ್ಲಿ ಇಂಟರ್ನೆಟ್, ಇಮೇಲ್, ಯಾವ ಸೌಲಭ್ಯನೂ ಇಲ್ಲ ಅಂತಾಯ್ತು. ನೀವು ಒಂದು ಗೆಳತಿಯಾಗಿ ಆಕೆಯ ಜೊತೆ ರಸಿಕತೆಯನ್ನ ಹಂಚಿಕೊಳ್ಳಲು ಸಾಧ್ಯವೇ? ಖಂಡಿತ ಇಲ್ಲ. ಹೆಚ್ಚೆಂದರೆ ನೀವು ಅವರನ್ನ console ಮಾಡಬಹುದು, ಅಥವಾ ಲೋಕಾನೀತಿ ವಿಚಾರಗಳನ್ನ ಮಾತನಾಡಿಕೊಳ್ಳಬಹುದು. ಒಂದು ವೇಳೆ ಒಂದು ಗಂಡು ಹೆಣ್ಣು ನಡುವೆ ರಸಿಕತೆ ಎಂಬ element ಇಲ್ಲವಾದಲ್ಲಿ, ಒಂದು ಸ್ವಾರಸ್ಯಮಯ ಜೀವನ ಸಾಧ್ಯವೇ? ಇಲ್ಲಿ ರಸಿಕತೆ ಅಂದರೆ sexual ದೃಷ್ಟಿಯಲ್ಲಿ ನಾ ಹೇಳಲಿಲ್ಲ.. ಅದರ ಗಾಢ ಅರ್ಥ ನಿಮಗೆ ತಿಳಿದಿರುತ್ತದೆ.

ನಿಮ್ಮ ಗೆಳತಿ ಒಂದು "boring " ಲೈಫಿಗೆ "resistance " ತೋರಿಸ್ತಾ ಇದ್ದಾರೆ. ನಾ ಶುರುವಿನಲ್ಲಿ example ಕೊಟ್ಟಿರುವ ಹಾಗೆ, ಈಕೆಗೂ ಸಹ ಅದೇ ರೀತಿಯಾದ ಸಂದರ್ಭ ಬಂದಿದೆಯೆಂದು ನನ್ನ ಅಭಿಪ್ರಾಯ. ಹೋಗಿ ಹೋಗಿ ಆಕೆಗೆ psychiatrist ಹತ್ತಿರ ಕರೆದುಕೊಂಡು ಹೋಗಬೇಕು ಅಂತ ಯಾವ "ಕ್ರೂರ ಮನಸ್ಸಿನಿಂದ" ಜನ ನಿರ್ಧರಿಸುತ್ತಾ ಇದ್ದರೋ ನಾ ಅರಿಯೆ. ಹೇಳೋದಾದ್ರೆ, ಈ ಆಧುನಿಕ ಜೀವನ ಶೈಲಿಯಲ್ಲಿ ನಾವು ವಾಸ್ತವದಿಂದ ಬಹಳ ದೂರ ಓಡಿ ಹೋಗುತ್ತಾ ಇದ್ದೇವೆ ಅನ್ಸುತ್ತೆ. ನಿಮ್ಮ ಗೆಳತಿಗೆ "depression " ಖಂಡಿತ ಆಗಿಲ್ಲ.. she has her "desires unsatisfied". ಮತ್ತೆ ಆ ಬಯಕೆಗಳು sexual ಅಂತ ನಾ ಹೇಳ್ತಾ ಇಲ್ಲ. they may be desires like spending time at a good location talking, laughing, kidding, and so on, going to movies including romantic ones, and importantly "sharing responsibilities ", etc...Anonymousnoreply@blogger.comtag:blogger.com,1999:blog-4790106144508237634.post-42556529297727376322010-04-01T11:45:56.686-07:002010-04-01T11:45:56.686-07:00ಮನಸಾರೆ ಅವರೇ,
ಒಂದ್ ವೇಳೆ ನಿಮ್ಮಂಥಹ outgoing ಆಗಿರುವ ವ...ಮನಸಾರೆ ಅವರೇ,

ಒಂದ್ ವೇಳೆ ನಿಮ್ಮಂಥಹ outgoing ಆಗಿರುವ ವ್ಯಕ್ತಿಗೆ ಅರ್ದ ಇಂಚ್ ಸೋಡಾ ಹಾಕಿಕೊಂಡು ಪುಸ್ತಕ ಜ್ಞಾನ ಬಿಟ್ಟು ಪ್ರಪಂಚಜ್ಞಾನವೇ ಅರಿಯದ ದಾಸಯ್ಯನೊಡನೆ ವಿವಾಹ ಆಗಿದ್ದಾದರೆ ನಿಮ್ಮ ಪರೀಸ್ಥಿತಿ ಹೇಗಿರುತ್ತಿತ್ತು ಎಂದು ಒಮ್ಮೆ ಯೋಚಿಸಿ.... ಆತ ಎಷ್ಟೇ ಸಂಭಾವಿತ ಅಥವಾ ಒಳ್ಳೆಯ ಗುಣ ಹೊಂದಿದ್ದರೂ ಸಹ, ನೆನೆಸಿಕೊಂಡರೆ ಮೈಯೆಲ್ಲಾ ಜುಮ್ಮೆನ್ನುತ್ತೆ ಅಲ್ವಾ?

ನಾ ಹೇಳಿದ ಹಾಗೆ ನಿಮ್ಮ ಲೇಖನಗಳಿಂದನೇ ನನಗೆ ಒಂದು ಪರಿಹಾರ ಕಂಡು ಬಂತು. ನೀವು Give me another chance, I wanna grow up once again ಅಂತ ಪರಿತಪಿಸ್ತಾ ಇದ್ದಿದ್ದಾದ್ರು ಯಾಕೆ? ನಿಮ್ಮ ಬಾಲ್ಯ ಸ್ನೇಹಿತರು ಹಾಗು ನಿಮ್ಮ ಪ್ರಿಯತಮನ (ಮುಖ್ಯವಾಗಿ "ನಿಮ್ಮ chemistry " ಗೆ ಹೊಂದುವಂಥಹ) ಜೊತೆಗೆ ಕಳೆದಿರುವ ಕ್ಷಣಗಳನ್ನು ಮನಸ್ಸಿನಲ್ಲೇ ಅವಲೋಕಿಸಿ ಆನಂದ ಪಡೆಯೋಣ ಅಂತ ಅಲ್ಲವೇ? ನೀವು lucky ಆಗಿದ್ದರಿಂದಾಗಿ ನಿಮಗೆ ಜೀವನಪರ್ಯಂತ ನಿಮ್ಮ ಆಲೋಚನೆ ಹಾಗು ಭಾವನೆಗೆ ಸ್ಪಂದಿಸುವ ಅಥವಾ "resonate " ಆಗುವ ಸಂಗಾತಿ ನಿಮಗೆ ಸಿಕ್ಕಿರುತ್ತಾರೆ. ನಿಮ್ಮ ಆ ದಿನಗಳ ಕ್ಷಣಗಳನ್ನು ಹಂಚಿಕೊಳ್ಳಲು ನಿಮ್ಮ ಪತಿಯ ಜೊತೆ, ಈ ರೀತಿಯಾದ ಅಂತರ್ಜಾಲ ಮಾಧ್ಯಮಗಳಿವೆ, ಮತ್ತೆ ನಿಮ್ಮಂಥಹ ಬಿಂದಾಸ್ ಆಗಿರುವ ಫ್ರೆಂಡ್ಸ್-ಸರ್ಕಲ್ ನಿಮ್ಮ ಸುತ್ತಲೂ ಇರುವುಧು ಖಚಿತ. ನೋಡಿ, ನೀವು ಮುಖನೇ ನೋಡದಿರುವ ಜನರ comment ನಿಂದಾಗಿ ಎಷ್ಟೊಂದು ಸಂತಸದ ಆಹ್ಲಾದ ಪಡೆಯುತ್ತಿದ್ದೀರ ಅಂತ!
cont'd..Anonymousnoreply@blogger.comtag:blogger.com,1999:blog-4790106144508237634.post-74505546147990323692010-04-01T09:22:37.090-07:002010-04-01T09:22:37.090-07:00ಮನಸಾರೆ ..ಅವ್ರೆ
ನಿಮ್ಮ ಈ ಬರಹ ಓದಿ ನಿಜಕ್ಕೂ ಮನಸಿಗೆ ಬೇಜಾ...ಮನಸಾರೆ ..ಅವ್ರೆ
ನಿಮ್ಮ ಈ ಬರಹ ಓದಿ ನಿಜಕ್ಕೂ ಮನಸಿಗೆ ಬೇಜಾರಾಯಿತು. ನಿಮ್ಮ ಗೆಳತಿಯ ಸ್ಥಿತಿಗೆ ತುಂಬಾ ಬೇಜಾರಾಗ್ತಾ ಇದೆ. ನಾನು ಸಲಹೆ ಕೊಡುವಷ್ಟು ದೊಡ್ಡವಳಲ್ಲ. ಹಿರಿಯರೆಲ್ಲ ಇಲ್ಲಿ ಒಳ್ಳೊಳ್ಳೆ ಸಲಹೆಗಳನ್ನೇ ಕೊಟ್ಟಿದ್ದಾರೆ. ಆದರೆ ನನಗೆ ಅನಿಸುವ ಕೆಲ ಅಭಿಪ್ರಾಯಗಳನ್ನು ಹೇಳಬಯಸುತ್ತೇನೆ. ಮದುವೆಗೆ ಮುಂಚೆ ತನ್ನ ಮನೆಯನ್ನೇ ಬಿಟ್ಟು ಬಳಿಗೆ ಹೋದಾಗ ಕಷ್ಟದಲ್ಲಿ ಕೈ ಬಿಟ್ಟಾತ ಅವಳನ್ನು ಪ್ರೀತಿಸುತ್ತಾನೆ ಅಂತ ನನ್ನ ಮನಸ್ಸಿಗೆ ಅನಿಸುವುದೇ ಇಲ್ಲ. ಆಗ ನೋವು , ಅವಮಾನಗಳನ್ನು ಅನುಭವಿಸಿದ್ದು ನಿಮ್ಮ ಗೆಳತಿಯೇ, ಅವನಲ್ಲ. ಈಗಿನ ವಿಷಯವೇನಾದರೂ ಬಹಿರಂಗವಾದರೆ ನೋವು, ಕಷ್ಟ , ಅವಮಾನಗಳನ್ನು ಅನುಭವಿಸುವುದು ನಿಮ್ಮ ಗೆಳತಿಯೇ , ಅವನಲ್ಲ. ಆದರಿಂದ ನಿಮ್ಮ ಗೆಳತಿ ಅವನ ಬಗ್ಗೆ ಒಳ್ಳೆಯ ಭಾವನೆಗಳನ್ನು ಮತ್ತೆ ಮೂಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನನ್ನ ಭಾವನೆ. ಈ ಪ್ರೀತಿ , ಪ್ರೇಮ , ಇವುಗಳನ್ನು ಬಿಟ್ಟು ಜೀವನವನ್ನು ಆನಂದಿಸಲು ಇನ್ನೂ ತುಂಬಾ ವಿಷಯಗಳಿವೆ ಎಂದು ನಿಮ್ಮ ಗೆಳತಿಗೆ ಅರಿಕೆಯಾಗುವುದು ಮುಖ್ಯ. ನೀವು ಹೇಳಿದಂತೆ ಆಕೆ ಚೆನ್ನಾಗಿ ಹಾಡುತ್ತಾರಾದರೆ ..ಅದರಲ್ಲಿ ಸಿಗುವಷ್ಟು ಖುಷಿ ಬೇರೆ ಎನಿದೆ ಅಲ್ವ...? ಹಾಡುಗಾರಿಕೆಯಂಥ ಪ್ರತಿಭೆಯನ್ನು ಎಲ್ಲರೂ ಪಡೆದುಕೊಂಡು ಬಂದಿರುವುದಿಲ್ಲ ಅಲ್ವ..?
ನಾನೂ ಕೂಡ ಇಂಥದೇ ಒಂದು ಕಥೆಯನ್ನು ಬರೆದಿದ್ದೇನೆ. ಯಂಡಮೂರಿಯವರ ಒಂದು ಕಾದಂಬರಿಯಿಂದ ಪ್ರೇರೇಪಿತಗೊಂಡು ಒಂದು ಪ್ರಯತ್ನ ಮಾಡಿದ್ದೇನೆ. ಆದರೆ ನಿಮ್ಮ ಈ ನೈಜ ಕಥೆಯನ್ನು ಓದಿ ಮನಸ್ಸಿಗೆ ತುಂಬಾ ಖೇಧವೆನಿಸಿತು.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-4790106144508237634.post-57411732196643299382010-03-31T21:24:25.150-07:002010-03-31T21:24:25.150-07:00ಮನದಿಂಚರ ಅವರೇ ( ಸರ್ ಅನ್ನಬೇಕೋ , ಮೇಡಂ ಅನ್ನಬೇಕೋ ಗೊತ್ತಿ...ಮನದಿಂಚರ ಅವರೇ ( ಸರ್ ಅನ್ನಬೇಕೋ , ಮೇಡಂ ಅನ್ನಬೇಕೋ ಗೊತ್ತಿಲ್ಲ :) ) ,
ನಮ್ಮ ಬ್ಲಾಗ್ ಗೆ ಸ್ವಾಗತ್ ಹಾಗೂ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ಮನದಿಂಚರಾ ನಿಜಕ್ಕೂ ಸುಂದರವಾದ ಹೆಸರು , ಆದ್ರೆ ನಿಮ್ಮ ಬ್ಲಾಗ್ ಖಾಲಿ ಇದ್ದಿದ್ದು ನೋಡಿ ಬೇಸರವಾಯಿತು , ನಿಮ್ಮ ಬ್ಲಾಗ್ ನಲ್ಲಿ ಬೇಗ ನಿಮ್ಮ ಮನದ ಕಂಪನಗಳು ಅಲೆಯೇಬ್ಬಿಸಲಿ , ಓದಲು ನಾವಿದ್ದೇವೆ .
ನನ್ನ ಲೇಖನದಲ್ಲೇ ಇದಕ್ಕೆ ಪರಿಹಾರ ಇದೆ ಅಂತಿರಿ , ಆದ್ರೆ ನಂಗೆ ಅರ್ಥ ಆಗ್ತಾ ಇಲ್ಲ . ನನ್ನ ಈ ಲೇಖನದಲ್ಲಾ ? ಇಲ್ಲ ಹಳೆ ಲೇಖನದಲ್ಲಾ? ಈ ಲೇಖನ ಅಂತು ಅವಳು ನಂಗೆ ವಿವರಿಸಿದ ಮನಸ್ಥಿತಿ ಯನ್ನ ಬರಿದಿದ್ದಿನಿ . ಹಳೆ ಲೇಖನಗಳು ಅಂದ್ರೆ ಕಾಲೇಜ್ ದಿನಗಳು ಅಲ್ವಾ ? ಅದು ಒಂದು ಜೋಶ ತುಂಬಿದ ದಿನಗಳ ನೆನಪಿನ ಮಾಲೆ ಅಸ್ಟೆ . ಪ್ಲೀಸ್ ನಂಗೆ ವಿವರವಾಗಿ ಹೇಳ್ತಿರಾ ? ಹೇಗೆ ನನ್ನ ಲೇಖನದಲ್ಲೇ ಪರಿಹಾರ ಇದೆ ಅಂತ ಅರ್ಥ ಆಗ್ತಿಲ್ಲ .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-14645671660183822052010-03-31T09:55:59.540-07:002010-03-31T09:55:59.540-07:00ಮನಸಾರೆ ಅವರೇ,
ನಿಮ್ಮ ಗೆಳತಿಯ ಬಗ್ಗೆ ಬರೆದಿರುವ ಲೇಖನವನ್ನ...ಮನಸಾರೆ ಅವರೇ,

ನಿಮ್ಮ ಗೆಳತಿಯ ಬಗ್ಗೆ ಬರೆದಿರುವ ಲೇಖನವನ್ನ ಓದಿದ ನಂತರ ನಿಮ್ಮ ಉಳಿದ
ಲೇಖನಗಳನ್ನ ಓದಿದೆ. In fact , ಹೇಳುವುದಾದರೆ ಈ ಸಮಸ್ಯೆಗೆ ನಿಮ್ಮ
ಬ್ಲೋಗ್ನಲ್ಲಿಯೇ ನನಗೆ ಒಂದು ಪರಿಹಾರ ಕಾಣಿಸುತ್ತಿದೆ. ನೀವು ನಿಮ್ಮ ಲೇಖನಗಳನ್ನ
ಬರೆಯುವಾಗ ನಿಮ್ಮ ಮನಸ್ಥಿತಿ ಹಾಗು ಉದ್ದೇಶವನ್ನ ಒಮ್ಮೆ ನೆನಪಿಸಿಕೊಳ್ಳಿ.

ಈಗಾಗಲೇ ನಿಮ್ಮ ಗೆಳತಿ ಸಾಕಷ್ಟು ಮಟ್ಟಿಗೆ ಕುಸಿದು ಹೋಗಿದ್ದಾರೆ (ನೀವು ಬಣ್ಣಿಸಿದ
ಪ್ರಕಾರವಾಗಿ). ವಿಮರ್ಶೆ ಹಾಗು ಸಹಾನುಭೂತಿಯಿಂದ ಯಾವ ಲಾಭವೂ ಸಿಗದು.
ನೀವು ನಿಮ್ಮ husband ಜೊತೆಯಲ್ಲಿ ನಾನು ಹೇಳಿದ ಬಗ್ಗೆ ಒಮ್ಮೆ ಚರ್ಚೆ ಮಾಡಿ.
ಬಹುಶ್ಯಃ ನಿಮಗೇ ಸುಲಭವಾಗಿ ಪರಿಹಾರ ಹೊಳೆಯುತ್ತದೆ. ನನ್ನ ಮನಸ್ಸಲಿದ್ದದ್ದನ್ನು
ನಿಮ್ಮ ಪ್ರತಿಕ್ರಿಯೆ ನೋಡಿ ತಿಳಿಸುತ್ತೇನೆ.

ಮನದಿಂಚರAnonymousnoreply@blogger.comtag:blogger.com,1999:blog-4790106144508237634.post-66049025808952745862010-03-30T09:47:32.487-07:002010-03-30T09:47:32.487-07:00ಗುರುಮೂರ್ತಿ ( ಸಾಗರದಾಚೆ ಇಂಚರ್) , ಗುರುದೆಸೆ , ಮನಮುಕ್ತ ...ಗುರುಮೂರ್ತಿ ( ಸಾಗರದಾಚೆ ಇಂಚರ್) , ಗುರುದೆಸೆ , ಮನಮುಕ್ತ ಹಾಗೋ ಮತ್ತೊಮ್ಮೆ ದಿನಕರ್ ಸರ್ ಅವರಿಗೆ ಧನ್ಯವಾದಗಳು .

@ ದಿನಕರ್ ಸರ್ ,
ಯಾರೋ ಗೊತ್ತಿಲ್ಲದವರ್ ಬಗ್ಗೆ ಓದಿ ಅವರ ಬಗ್ಗೆ ನೀವು ತೋರುತ್ತಿರುವ ಕಾಳಜಿ ಶ್ಲಾಗನಿಯ . ನಿಜವಾಗಿಯೂ ನಾನು ಸಹ ಒಂದು ಸಲ ಓದಿ , ಒಂದು ತಿಳಿದ್ದಿದ್ದು ಹೇಳಿ ಆ ಬಗ್ಗೆ ಮರೆತೇ ಬಿಡ್ತಿದ್ದೆ . ಆದ್ರೆ ನಿಮ್ಮದು ತುಂಬಾ ಕರುಣಾಮಯಿ ಹೃದಯ , ಇನ್ನೊಬ್ಬರ ಅದು ತಮಗೆ ಸಂಬಧವೆ ಇಲ್ಲದವರ್ ಬಗ್ಗೆ ನೀವು ಕೊಡುತ್ತಿರುವ ಕಾಳಜಿಪೂರ್ವಕ್ ಸಲಹೆಗಳಿಗೆ ಮಾನವೀಯತೆ ಎತ್ತಿ ತೋರಿಸುತ್ತೆ . ನೀವು ಹಾಗೂ ನಮ್ಮ ಜಲನಯನ್ ಸಾರ್ ಹೇಳಿದ ಹಾಗೆ ರಫೀಕ್ ಜೊತೆ ನಾನು ಇಲ್ಲವೇ ನಮ್ಮ ಯಜಮಾನರು ಮಾತಾಡೋ ಬಗ್ಗೆ ಯೋಚಿಸಿತಿವಿ . ನಂಗು ಅವಳಿಗೆ ಡಾಕ್ಟರ ಹತ್ರ ಕರೆದು ಕೊಂಡು ಹೋಗುವದು ಸರಿ ಅನ್ನಿಸ್ತ ಇಲ್ಲ . ಮೊದಲು ನಮ್ಮ ಕೈಲಿ ಏನಾಗುತ್ತೆ ಅದನ್ನ ಪ್ರಯತ್ನ ಮಾಡೋಣ , ಆಮೇಲೆ ಇನ್ನು ಇದು ಜಾಸ್ತಿ ಆದ್ರೆ ಖಂಡಿತ ತಜ್ಞರ ಸಲಹೆ ಕೇಳೋಣ .

@ ಮನಮುಕ್ತ
ನೀವು ಹೇಳಿದ ಸಲಹೆ ತುಂಬಾ ಸೂಕ್ತ ಹಾಗೂ ತುಂಬಾ ಸಹಾಯವಾಗಬಹುದು . ಅವಳಿಗೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಸೇರಿಕೊಳ್ಳಲಿಕ್ಕೆ ಸಾಧ್ಯ ಆಗೋತ್ತೋ ಇಲ್ವೋ ನೋಡ್ಬೇಕು . ಅವಳ ಮನೇಲಿ ಎಲ್ಲದಕ್ಕೂ ಅತ್ತೆ ಹಾಗೂ ದೊಡ್ಡ ನೆಗ್ಯನಿ ಅನುಮತಿ ಬೇಕು . ಅವರು ಇಷ್ಟು ದೂರ ಬೆಂಗಳೂರಿಗೆ ಕಲಿಹಿಸೋ ಸಾದ್ಯತೆ ಕಡಿಮೆ . ಆದ್ರೆ ಖಂಡಿತ ಅವಳಿಗೆ ಪ್ರಾಣಾಯಾಮ , ಮನಸ್ಸೇ ರೆಲಕ್ಷ ಪ್ಲೀಸ್ ಅಂತ ಬುಕ್ ಮತ್ತು ಸಿಡಿ ಕಳುಹಿಸಿ ಕೊಡಬೇಕು. ಅವಳು ಇಲ್ಲಿದೆ ಬಂದಾಗ್ ಆ ಥರ ಯಾವುದಾದರು ಕೋರ್ಸ್ ಇದೆ ಅಂತ ನೋಡ್ತೀನಿ .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-65013173468485511042010-03-30T09:34:52.619-07:002010-03-30T09:34:52.619-07:00ಸಂತೋಷ್ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ನಮ...ಸಂತೋಷ್ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ನಮ್ಮ ಬ್ಲಾಗ್ಗೆ ನಿಮಗೆ ಸ್ವಾಗತ . ನಿಮ್ಮ ಹಾಗೂ ಚಿತ್ರ ಮೇಡಂ ಬಗ್ಗೆ ಪ್ರಕಾಶಣ್ಣನ ಬ್ಲಾಗ್ ನಲ್ಲಿ ಓದಿದ್ದೆ . ನಿಮ್ಮ ಇಬ್ಬರಿಗೂ ನನ್ನ ಶುಭ ಹಾರೈಕೆಗಳು . ಇನ್ನು ನಮ್ಮ ವಿಷಯಕ್ಕೆ ಬರೋಣ.
ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು ನಿಮ್ಮ ವಿಚಾರ ತಕ್ಕ್ ಮಟ್ಟಿಗೆ ಸರಿಯಾಗಿದೆ . ಇಲ್ಲಿ ಅವಳ ಸ್ವೇಚ್ಚೆಕಾರಕ್ಕೆ ಯಾರು ನಿರ್ಭಂದನೆ ಹಾಕಿಲ್ಲ . ಹ್ಹಾ ಅವಳು ಹೊರಗಡೆ ಕೆಲಸಕ್ಕೆ ಹೋಗಕ್ಕೆ ಮನೆ ಹಿರಿಯರ ಅನುಮತಿ ಇಲ್ಲ . ಅವರ ಪ್ರಕಾರ್ ಅದು ಅವಳಿಗೆ ಅನಾವಶ್ಯಕ್ . ಗಂಡ ಕೆಟ್ಟವನಲ್ಲ , ಇವಳಿಗೆ ಏನು ತೊಂದರೆ ಕೊಡಲ್ಲ . ಆದ್ರೆ ಜವಾಬ್ದಾರಿ ಇಲ್ಲ ಅಸ್ಟೆ . ಅದು ಈಗ ಹೆಮ್ಮರವಾಗಿದೆ . ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
ಹೆಂಡತಿ , ಮಕ್ಕಳ ಮನೆ ಜವಾಬ್ದಾರಿ ಇಲ್ಲದವನಿಗೆ ಯಾವ್ ಕೌನ್ಸಿಲಿಂಗ್ ಹೆಲ್ಪ್ ಮಾಡುತ್ತೆ ಹೇಳಿ .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-60341671353409243522010-03-30T07:08:09.650-07:002010-03-30T07:08:09.650-07:00ಮನಸಾರೆಯವರೆ,
ನಿಮ್ಮ ಗೆಳತಿ ತು೦ಬಾ ನಾಜೂಕಾದ ಪರಿಸ್ಥಿತಿಯನ್...ಮನಸಾರೆಯವರೆ,
ನಿಮ್ಮ ಗೆಳತಿ ತು೦ಬಾ ನಾಜೂಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.ಅವರಿಗೆ ಚುಕ್ಕಿಚಿತ್ತಾರದವರು ಸೂಚಿಸಿದ೦ತೆ ಮಾನಸಿಕ ತಜ್ನರ ಬಳಿ ಸಲಹೆ ಕೇಳುವುದೇ ಉತ್ತಮ ಎನಿಸುತ್ತದೆ.ಯಾವುದೇ ಕಾರಣದಿ೦ದ ಅದು ಸಾಧ್ಯವಾಗದೇ ಹೊದರೆ ಆರ್ಟ್ ಆಫ್ ಲಿವಿ೦ಗ್ ನ೦ತಹ ಯಾವುದಾದರೂ Spiritual courses ಮಾಡಿದರೆ ಕೂಡಾ ಅನುಕೂಲವಾಗಬುಹುದು ಎ೦ದು ನನಗನ್ನಿಸುತ್ತದೆ.ಅವುಗಳಲ್ಲಿ ಜೀವನಕ್ಕೆ ಸರಿಯಾದ ಮಾರ್ಗ ದರ್ಶನ ಸಿಗುತ್ತದೆ.ಪ್ರಾಣಾಯಾಮ ಧ್ಯಾನಗಳಿ೦ದ ಖಿನ್ನತೆ ದೂರವಾಗುತ್ತದೆ.ಈನಿಟ್ಟಿನಲ್ಲಿ ಒಮ್ಮೆ ಆಲೋಚಿಸಿ ನೋಡಿ.
ಯಾವುದಾದರು ಮಾರ್ಗದಿ೦ದ ನಿಮ್ಮ ಗೆಳತಿ ಸಮಸ್ಯೆಯಿ೦ದ ದೂರವಾಗಿ ತನ್ನ ಸ೦ಸಾರ ಸರಿಯಾಗಿ ನೋಡಿಕೊ೦ಡು ಸುಖವಾಗಿ ಬಾಳಲಿ ಎ೦ದು ಹಾರೈಸುತ್ತೇನೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-4790106144508237634.post-33789788371914237492010-03-30T01:08:50.273-07:002010-03-30T01:08:50.273-07:00ಮನಸಾರೆ ಮೇಡಂ,
ತುಂಬಾ ಗಂಬೀರವಾಗಿ ಇಲ್ಲಿನ ಅನಿಸಿಕೆಗಳನ್ನು ...ಮನಸಾರೆ ಮೇಡಂ,
ತುಂಬಾ ಗಂಬೀರವಾಗಿ ಇಲ್ಲಿನ ಅನಿಸಿಕೆಗಳನ್ನು ದಿನಾಲು ಓದುತ್ತಿದ್ದೇನೆ..... ಆಜಾದ್ ಸರ್ ಹೇಳಿದ ಹಾಗೆ , ರಫ್ಹೀಕ್ ನ ಹತ್ತಿರ ಮಾತಾಡಿ ನೋಡಿ..... ತುಂಬಾ ಕೂಲ್ ಆಗಿ ಮಾತಾಡಿ, ...... ನಿಜವಾದ ಪ್ರೀತಿ ಇರೋದು, ಇನ್ನೊಬ್ಬರ ಒಳ್ಳೆಯದು ಹಾರೈಸುವುದರಲ್ಲಿ....... ಆತನಿಗೆ , ನಿಮ್ಮ ಗೆಳತಿಯ ಆಶಯ ಬಯಸುವುದೇ ಆಗಿದ್ದಲ್ಲಿ, ಆತ ನಮ್ಮೆಲ್ಲರ ಹಾರೈಕೆಯ ಹಾಗೆ ಈಕೆಯನ್ನು ಬಿಟ್ಟು, ತನ್ನ ಸಂಸಾರವನ್ನೂ ಚೆನ್ನಾಗಿ ನೋಡಿಕೊಂಡು ಇರುತ್ತಾನೆ....... ಈಗ ಹೇಗಿದ್ದರೂ ಬೇಸಿಗೆ ರಜೆ ಮಕ್ಕಳಿಗೆ...... ನಿಮ್ಮ ಮನೆಗ ಗೆಳತಿ ಮಕ್ಕಳನ್ನು ಕರೆಸಿಕೊಂಡು ಮಾತಾಡಿ, ಅವರ ಅನುಮತಿ ಇದ್ದಾರೆ ಡಾಕ್ಟರ ಚಿಕಿತ್ಸೆ ಕೊಡಿಸಿ..... ನನ್ನನ್ನು ನಾನು ಸರಿ ಮಾಡಿಕೊಳ್ಳುತ್ತೇನೆ ಎನ್ನುವುದಾದರೆ ಡಾಕ್ಟರ ಬೇಕಾಗಲ್ಲ ಆಲ್ವಾ ಮೇಡಂ, ...... ನಿಜವಾದ ಪ್ರೀತಿಯ ಸುಖ ತ್ಯಾಗದಲ್ಲಿದೆ ಅಂತಾರೆ...... ನೋಡೋಣ...... ರಫೀಕ್ ಮತ್ತು ನಿಮ್ಮ ಗೆಳತಿ ಇಬ್ಬರೂ ತ್ಯಾಗ ಮಾಡಿ ತಮ್ಮ ತಮ್ಮ ಸಂಸಾರದಲ್ಲೇ ಮುಂದುವರಿದರೆ ಎಲ್ಲರಿಗೂ ಒಳ್ಳೆಯದು..... hoping ಫಾರ್ ದಿ ಬೆಸ್ಟ್...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-4790106144508237634.post-30958287592591908932010-03-29T23:21:28.211-07:002010-03-29T23:21:28.211-07:00'Manasaare'-
ಕಥಾ ನಾಯಕಿಯ ಮನಸ್ಸು ತುಂಬಾ ಇಕ್ಕ...'Manasaare'-

ಕಥಾ ನಾಯಕಿಯ ಮನಸ್ಸು ತುಂಬಾ ಇಕ್ಕಟ್ಟಿನಲ್ಲಿದೆ..
ದಿನಕರ ಅವರು ಎಲ್ಲವನ್ನು ಸವಿವರವಾಗಿ ಹೇಳಿದ್ದಾರೆ,ಹಾಗೇ ಮಾಡಿ...

ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-4790106144508237634.post-19850611237888905022010-03-29T21:00:44.268-07:002010-03-29T21:00:44.268-07:00ರಮೇಶ್ ಅವರೇ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ಅವಳು...ರಮೇಶ್ ಅವರೇ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು . ಅವಳು ನಾನು ಬರಿ ಒಂದುವರೆ ವರ್ಷ ಕೂಡಿ ಕಲಿತಿದ್ದರು ಕೂಡ ನಾವಿಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್ . ನೀವು ಹೇಳಿದ ಹಾಗೆ ಅವಳು ಈಗಿನ ಪರಿಸ್ತಿತಿ ಅನುಸರಿಸಿಕೊಂಡು ಹೋದರೆ ಎಲ್ಲರಿಗು ಹಿತ .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-70568330461337989962010-03-29T20:51:37.093-07:002010-03-29T20:51:37.093-07:00ಜಲನಯನ್ ಸಾರ್ ,
ನಿಮ್ಮ ತಡವಾದ್ ಅಭಿಪ್ರಾಯಕ್ಕೆ ನಮ್ಮ ಧನ್ಯ...ಜಲನಯನ್ ಸಾರ್ ,

ನಿಮ್ಮ ತಡವಾದ್ ಅಭಿಪ್ರಾಯಕ್ಕೆ ನಮ್ಮ ಧನ್ಯವಾದಗಳು :) . ನಮ್ಮ ಬ್ಲಾಗ್ ನಿಮ್ಮ ಅಭಿಪ್ರಾಯಕ್ಕೆ ಕಾಯ್ತಾ ಇರುತ್ತೆ ಅಂತ ಮರಿಬೇಡಿ . ನೀವು ಕೊಟ್ಟ ಡಾಕ್ಟರ ಮಾಹಿತಿಗೆ ತುಂಬಾ ತುಂಬಾ ನೆ ಧನ್ಯವಾದ . ನೀವು ಹೇಳಿದ ಹಾಗೆ ಮನೋರೋಗದ ಆಸ್ಪತ್ರೆ ಕಿಂತ ನರ್ಸಿಂಗ್ ಹೋಂ ಗೆ ಕರೆದೊಯ್ದರೆ ಉತ್ತಮ . ಅದಕ್ಕಿಂತ್ ಮೊದಲು ಮೇಲೆ ಹೇಳಿದ ಕೆಲವು ಸಲಹೆಗಳಿಂದ ಏನಾದ್ರೂ ಬದಲಾವಣೆ ಆಗುತ್ತ ನೋಡುತ್ತೀನಿ . ಅವಳು ಅತ್ಯಂತ ಭಾವುಕ , ಹಾಗೂ ಪ್ರೀತಿಗೆ ಸುಲಭವಾಗಿ ಸೋಲುವಳು ಅಂತ ನಿಮಗೆ ಹೇಗೆ ಗೊತ್ತಾಯ್ತು ? ನಿಜ ಅವಳು ಭಾವುಕಳು , ಎಲ್ಲರಿಗಾಗಿ ಪ್ರೀತಿ ತುಂಬಿದ ಹೃದಯ ಅವಳದು . ಕಲಾವಿದಳು ಅದಕ್ಕೆ ಇರಬೇಕು ಭಾವುಕತೆ ತುಂಬಿದೆ ಅಂತ .
ರಫೀಕ್ ಜೊತೆ ಮಾತಾಡುವ ಸಲಹೆ ಒಳ್ಳೇದು , ನೋಡೋಣ . ಅವನ ಫೋನ್ ನಂಬರ್ ಅವಳ ಹತ್ರ ನೆ ಕೇಳಬೇಕು . ಪಿ . ಯು ಕಾಲೇಜ್ ನಲ್ಲಿ ನಾನು ಅವಳು ಒಟ್ಟಿಗೆ ಓದುತ್ತಿದ್ದಗ್ , ಅವಳು ಹಾಗೂ ಅವನ್ ಬಗ್ಗೆ ಗೊತ್ತಿತ್ತು . ಆದ್ರೆ ನಾನು ಒಮ್ಮೆಯೂ ಅವನನ್ನ ನೋಡಿಲ್ಲ . ಮಾತಾಡುವದು ಹೇಗೆ ಗೊತ್ತಿಲ್ಲ . Nann ಪತಿಗೆ ಹೇಳಿ ನೋಡ್ತೀನಿ .
ಈ ವಿಚಾರ ಅವಳು ನಂಗೆ ಹೇಳಿ ೬ ತಿಂಗಳಾಯಿತು . ಅವಳು ಹುಬ್ಬಳಿ ಯಲ್ಲಿ ಇದ್ದಿದುರಿಂದ ಇಲ್ಲಿವರೆಗಿನ ಅವಳ ಹಾಗೂ ಅವನ ಬಗ್ಗೆ ಬರಿ ಫೋನ್ ನಲ್ಲೆ ನಬ್ಬಿರ ಮಾತು ಕತೆ ಆಗಿದೆ . ಈ ವಿಷಯವಾಗಿ ಸುಮಾರು ಸಲ ನಬ್ಬಿಬರ್ ಗೆಳೆತನ ಅಲ್ಲಿ ಇಲ್ಲಿ weak ಆಗಿದ್ ಅನುಭವನು ಆಗಿದೆ . ಆದ್ರೆ ಇತ್ತಿಚಿಕೆ ಅವಳಿಗೆ ಕಾಂಫಿದೆನ್ಚೆ ಇಲ್ಲ . ವಾರದಲ್ಲಿ ೨ ಬಾರಿ ಆದರು ಸುಮ್ಮನೆ ಅಳುತ್ತಲೇ . ಒಮ್ಮೊಮ್ಮೆ ಗಾಭರಿ ಹುಟ್ಟಿಸುತ್ತೆ .
ನೋಡೋಣ ಸರ್ ನಮ್ಮ ನಿಮ್ಮೆಲ್ಲರ್ ಹಾರೈಕೆ ಇಂದ ಇದು ಸರಿ ಆದ್ರೆ ಸಾಕು

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-85347726126754049792010-03-29T09:06:46.769-07:002010-03-29T09:06:46.769-07:00Manasaare
olleya baraha
heluvudannella ellaroo h...Manasaare

olleya baraha

heluvudannella ellaroo heli mugisiddaare :)

nammadu kevala haaraisuvudu eaga :)ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-4790106144508237634.post-47454535879908235892010-03-29T03:29:41.793-07:002010-03-29T03:29:41.793-07:00ಬಹುಷಃ counselling ಬೇಕಾಗಿರುವುದು ನಿಮ್ಮ ಸ್ನೇಹಿತೆಗಲ್ಲ...ಬಹುಷಃ counselling ಬೇಕಾಗಿರುವುದು ನಿಮ್ಮ ಸ್ನೇಹಿತೆಗಲ್ಲ , ಆಕೆಯ ಗಂಡನಿಗೆ . ಮೊದಲು ಆ ಮನುಷ್ಯನಿಗೆ ಕೌನ್ಸೆಲ್ಲಿಂಗ್ ಮಾಡ್ಸಿ ..

ಯಾವುದೇ ಹೆಣ್ಣು ಅತೀ ಸ್ವತಂತ್ರಳಾಗಿರಲು ಬಯಸುವುದಿಲ್ಲ! ಹೆಣ್ಣಿಗೆ ಯಾವಾಗಲೂ ಒಂದು ಕಂಫರ್ಟಬಲ್ ಆಗಿರೋ ಜೈಲು ಬೇಕು. ಅವಳ ವಾದ, ಜಗಳ, ನಿಲುವು ತೀರ್ಮಾನಗಳು ಅವಳಿರುವ ಜೈಲಿಗೆ ಕಂಫರ್ಟ್ ಒದಗಿಸಲಿಕ್ಕೇ ಹೊರತು ಅವಳಿಗೆ ಸ್ವೇಚ್ಛಾಚಾರದ ವಿಚಾರವೇ ಇರುವುದಿಲ್ಲ . ಆಕೆಗೆ ಇಗಾಗಿರುವ ಮನಸ್ಸಿನ ಭಾವ ಒಂದು ತರಹನಾದ ಚಡಪಡಿಕೆ ... ಈ ಡಿಫ್ರೆನ್ಸಿಯೇಶನ್ನು ಅವಳಿಗೆ ಒಂದು ತರಹ ವಿಚಿತ್ರ ಖುಷಿ ಕೊಡಬಹುದು

ಎಲ್ಲೋ ಒಮ್ಮೆ ಓದಿದ ನೆನಪು " If persons are to be completely honest to each other as well as to themselves, it is extremely important that they do not keep secrets from each other..
That condition is the beginning of self discovery. That is where you find out who you truly are"Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-4790106144508237634.post-33574220132664153322010-03-29T02:18:28.828-07:002010-03-29T02:18:28.828-07:00Manasaare avare,
Modalige, nimma gelathiya bagge ...Manasaare avare,

Modalige, nimma gelathiya bagge nimagiruva visheshavaada preethi haagu kaaLaji santasa koduttade...

Nimma geLathiya vishayadalli nanna prakaara yeradu mukhya vichaaragaLive..

1. Avaru hinde kaLedukonda preethi haagu adarindaagi avara maneyalli aada avamaanagaLu
2. Avara gandana bejavabdaaritana mattu idarindaagi besatta avara manassu.

Eega nanna prakaara agiruvudenendare, avarige matte taanu hindina reethi snehitana preethi sikku, tanage ishtavaadante baalabahudu, annuva anisike.. Aadare avare aagali athava avara geleyanagali hindina reethi illa annodu avarige manavarike aagabekide.. modaligintha eegina avara stithi-gathigalu badalaagive haagu bahala sookshma agive.. yekendare, hindeye maduve aagada geleya, eega baalinuddakku jothegiruvanemba andha-nambike avarige aagiruvanthide...

nanage tilidavarobbara magalu, heege obba hudugana hinde biddu Engineering exams miss madta idlu. Aaga naanu madiddenendare, avalige nanna mattobba gelathiyinda kelavu avamaanakaravaada ghatanegalannu bannisalu request madide. Aa nanna gelathiyu ide reethiyaagi exams miss madkondanthavalu.

Neevu nimma gelathige heegenadru madabahudu annisidre adu bahala upayuktavaaga bahudu.. Idarondige yavudadru doctor na kuda consult madodu Olledu...

Nimma gelathiyu ee trishanku-vininda bega horabarali.. haage nimage mattu nimma kaalaji ge abhinandanegalu...Rameshhttps://www.blogger.com/profile/12124654922064484022noreply@blogger.comtag:blogger.com,1999:blog-4790106144508237634.post-42746105316160844312010-03-28T12:32:58.060-07:002010-03-28T12:32:58.060-07:00ಮನಸಾರೆಯವರೇ, ನಿಮ್ಮ ಈ ಗೆಳತಿಅಯನ್ನ ನೆನೆಸಿಕೊಂಡರೆ ಕರಳು ಕ...ಮನಸಾರೆಯವರೇ, ನಿಮ್ಮ ಈ ಗೆಳತಿಅಯನ್ನ ನೆನೆಸಿಕೊಂಡರೆ ಕರಳು ಕಿವುಚುತ್ತೆ...ಒಂದಂತೂ ನಿಜ...ಈಕೆ..ಬಹಳ ಭಾವುಕಳು..ಪ್ರೀತಿಗೆ ಸುಲಭದಲ್ಲಿ ಸೋಲುವವಳು...ಮತ್ತು ಭ್ರಮನಿರಸನಕ್ಕೊಳಗಾಗಿರುವಳು...ಇಲ್ಲಿ ಮಾನಸಿಕ ಬಲಹೀನತೆಯೇ ಹೆಚ್ಚು ಕಾಣುತ್ತಿದೆ...ಪ್ರಕಾಶನ ಮಾತು ಅಕ್ಷರಶಃ ಸತ್ಯ..ಮಕ್ಕಳ ಬಾಳು ಡೋಲಾಯಮಾನವಾಗುತ್ತದೆ...ಗಂಡ ಕೆಟ್ಟವನಲ್ಲ ಎನ್ನುವಮಾತು ನಿಮ್ಮ ಗೆಳತಿ ಒಪ್ಪುತ್ತಾಳೆಯಾದ್ದರಿಂದ..ಇಲ್ಲಿ ದ್ವಿಮುಖ ಕೌನ್ಸಲ್ಲಿಂಗ್ ನಡೆದರೆ ಉತ್ತಮ ಎಂದೇ ನನ್ನ ಅನಿಸಿಕೆ. ಚುಕ್ಕಿಚಿತ್ತಾರರ ಮಾತು ಸರಿಯೆನಿಸುತ್ತೆ..Psycho and Psychiatric counselling ಬೆಕಾಗುತ್ತೆ.
ಇಲ್ಲಿ ಮನೋರೋಗದ ಗೊತ್ತಾದ ಆಸ್ಪತ್ರೆ ನನಗೆ ಸರಿಯೆನಿಸುವುದಿಲ್ಲ ಏಕೆಂದರೆ ಅಲ್ಲಿಗೆ ಕರೆದೊಯ್ದರೆ ಆಕೆಯ ಬಲಹೀನ ಮನಸಿಗೆ ಪೆಟ್ಟು ..ನರ್ಸಿಂಗ್ ಹೋಮ್ ಗೆ ಮನೋವೈದ್ಯರಲ್ಲಿಗೆ ಕರೆದೊಯ್ದರೆ ಒಳಿತು.

Bangalore Institute of Dental Science (before NIMHANS bus stop) ಗೆ ಮೊದಲು, On Hosur Road one stop before Lakkasandra, there is ABHAYA NURSING home (left side when going towards Lalbagh main gate or right side while going from Lalbagh main gate towards dairy circle) ಅಲ್ಲಿ ಡಾ. ಜಗದೀಶ್ ಎನ್ನುವ (ಅವರ ಕಾರ್ಯ ವೈಖರಿ ಬಹಳ ಪರಿಣಾಮಕಾರಿಯಂತೆ) ಮನೋವೈದ್ಯರಿದ್ದಾರೆ...ಅವರಲ್ಲಿ ಮೊದಲು ಕೂಲಂಕುಶವಾಗಿ ತಿಳಿಸಿ ಆಕೆಯನ್ನೂ ಆಕೆಯ ಪತಿಯನ್ನೂ ಕೌನ್ಸಿಲಿಂಗ್ ಮಾಡಿಸಿದರೆ ಒಳ್ಲೆಯದು...
ಅವರ ಬಳಿ ಮಾತನಾಡಿ ಮೆಡಿಕೇಶನ್ ಕಂ ಕೌನ್ಸಲಿಂಗ್ ಮೂಲಕ ಪರಿಹಾರ ಹುಡುಕಿಸಬೇಕು....ಇಲ್ಲಿ ರಫೀಕನ ಬಳಿಗೆ ಹೋಗುವ ವಿಚಾರವನ್ನು ಹೇಗಾದರೂ ನಿಮ್ಮ ಗೆಳತಿಯ ಮನಸ್ಸಿಂದ ತೆಗೆದು ಹಾಕಬೇಕಾದ್ದು ಬಹು ಮುಖ್ಯ...ಅದಕ್ಕೆ ಸಾಧ್ಯವಾಗುವ ಹಾಗಿದ್ದರೆ ಅವನಲ್ಲಿ ಹೇಳಿ ನಿಮ್ಮ ಗೆಳತಿಗೆ ಫೋನ್ ಮಾಡದಂತೆ ತಡೆಯಿರಿ...ಇಲ್ಲ ನಿಮ್ಮ ಗೆಳತಿಗೆ ಅವನ ಬಳಿ ಹೋಗುವುದರಿಂದ ಮಕ್ಕಳ ಮೇಲೆ ವಿಪರೀತ ಪರಿಣಾಮ ಆಗುವುದಲ್ಲದೇ ನಿಮ್ಮ ಗೆಳತಿಯ ಭವಿಷ್ಯದ ಬಗ್ಗೆಯೂ ಹೀಗೇ ಎಮ್ದು ಹೇಳಲಾಗದು ಎಂದು ತಿಳಿಸಿ... .. ಮಕ್ಕಳಿರುವ ಕಾರಣ ಮತ್ತು ರಫೀಕ ನಂಬಿಕಸ್ತನೆನ್ನುವ ಯಾವುದೇ ಆಧಾರವಿಲ್ಲದ ಕಾರಣ..ಕೇವಲ ಆಕರ್ಷಣೆಗೆ ಕಟ್ಟುಬಿದ್ದರೆ...ಬದುಕ ಮುಮ್ದೆ ಸಹಿಸಲಸಾಧ್ಯವಾಗಬಹುದು....
ಇನ್ನು ವಿಚಾರ ವಿಮರ್ಶೆ ಮಾಡಿ ನಿರ್ಧರಿಸಿ....ನಿಮ್ಮ ಗೆಳತಿಗೆ ಶೀಘ್ರ ಆರೋಗ್ಯ ಸುಧಾರಿಸಲಿ ಮತ್ತು ಶುಭವಾಗಲಿ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-4790106144508237634.post-17950021393640106252010-03-28T09:45:17.790-07:002010-03-28T09:45:17.790-07:00ಸುಪ್ತವರ್ಣ ಸರ್,
ನಮ್ಮ ಬ್ಲಾಗಿಗೆ ನಿಮಗೆ ಸ್ವಾಗತ . ನಿಮ್ಮ...ಸುಪ್ತವರ್ಣ ಸರ್,
ನಮ್ಮ ಬ್ಲಾಗಿಗೆ ನಿಮಗೆ ಸ್ವಾಗತ . ನಿಮ್ಮ ಅಭಿಪ್ರಾಯಕ್ಕೂ ಧನ್ಯವಾದಗಳು . ಇಲ್ಲಿ ಆ ಮುಸ್ಲಿಂ ಹುಡುಗ ಒಳ್ಳೆಯವನಿಗಿದ್ದರು ಕೂಡ , ಅವಳ ಮಕ್ಕಳು ಅವನನ್ನು ತಂದೆ ಅಂತ ಒಪ್ಪಿಕೊಳ್ತಾವಾ? ನೀವೇ ಒಂದು ಸಲ ಯೋಚಿಸಿ ನೋಡಿ .ಯಾರು ಎಷ್ಟು ಒಳ್ಳೆವರಗಿರಲಿ ತನ್ನದಲ್ಲದ ಮಕ್ಕಳನ್ನ ಬರಿ ಕರುಣೆ ಇಂದ ನೋಡಿಕೊಳ್ಳಬಹುದು ಆದ್ರೆ ಅವನಿಂದ ಮಕ್ಕಳಿಗೆ ಸಿಗಬೇಕಾದ ತಂದೆ ಪ್ರೀತಿ , ಭದ್ರತೆ ಸಿಗೋಲ್ಲ . ನಿಮ್ಮ ಮಾತಿನಲ್ಲಿಯೂ ಸತ್ಯ ಅಡಗಿದೆ , ಅದನ್ನ ನಾನು ಖಂಡಿತ ಒಪ್ಪಿಕೊಳ್ಳುತೇನೆ . ನಾನು ಹಾಗೂ ನನ್ನ ಪತಿ ಅವಳಿಗೆ ನಮಗೆ ಅನ್ನಿಸಿದ್ದು ಹೇಳಬಹುದು , ಕೌನ್ಸೆಲಿಂಗ್ ಕೊಡಿಸಬಹುದು ಆಮೇಲೆ ನಮ್ಮ ನಮ್ಮ ಮನೆಗೆ ಬಂದು ನಮ್ಮ ಜೀವನದಲ್ಲಿ ವ್ಯಸ್ತವಾಗುತ್ತೇವೆ . ಪ್ರತಿ ದಿನ ಪ್ರತಿ ಗಳಿಗೆ ಅನುಭವಿಸೋಳು ಅವಳು. ನಾನಾಗಲಿ ಮತ್ತೆ ಬೇರೆ ಯಾರಗಲಿ ಅವಳಿಗೆ ಒಬ್ಬ ಜವಾಬ್ದಾರಿ ಗಂಡನ ಸ್ಥಾನನ ತುಂಬೋಕೆ ಆಗೋಲ್ಲ . ಅಂತಿಮ ನಿರ್ಧಾರ ಅವಳೇ ತೊಗೊಳೆಕೆ ಸಾದ್ಯ . ನಂಗು ಗೊತ್ತು ಎಲ್ಲ ಹುಡುಗಿಯಂತೆ ಅವಳು ತನ್ನ ಗಂಡನ ಬಗ್ಗೆ ಕನುಸು ಕಂಡವಳೇ , ಆದ್ರೆ ಅದು ಅವಳಿಗೆ ನನಸಾಗಲಿಲ್ಲ ಅಂತ ನಂಗು ದುಖ ಇದೆ . ಆದ್ರೆ ಅವಳು ಒಂದು ತಪ್ಪು ನಿರ್ಧಾರದಿಂದ ಅವಳಸ್ತೆ ಅಲ್ಲ ಅವಳ ಜೊತೆ ತುಂಬಾ ಜೀವಗಳು ಯಾತನೆ ಅನುಭವಿಸ ಬೇಕಾಗುತ್ತದೆ . ಆದ್ರೆ ಅದು ಒಂದು ಆತುರದ ನಿರ್ಧಾರ ಆಗಿರಬಾರದು . ಇಲ್ಲಿ ರಫೀಕ್ ಗು ಮದುವೆ ಆಗಿದೆ ಅನ್ನೋ ವಿಚಾರ ನಾವು ಮರಿ ಬಾರದು . ಹೌದು ಒಬ್ಬ ವ್ಯಕ್ತಿಗೆ ಮುಕ್ತವಾಗಿ ತನಗೆ ಎದರಲ್ಲಿ ಸಂತೋಷ್ ಇರುತ್ತೆ ಆ ಥರ ಜೀವನ ಮಾಡೋ ವಾತಾವರಣ ನಮ್ಮಲ್ಲಿ ಇಲ್ಲ . ಅವನು/ ಅವಳು ಸಮಾಜದ ಕಟ್ಟಳೆ, ಚೌಕಟ್ಟಿನಲ್ಲಿ ಇರಬೇಕು. ಅದೊಂದು ಸಲ ಬೇಸರದ ಸಂಗತಿ ಆಗುತ್ತೆ . ಆದ್ರೆ ಆ ಚೌಕಟ್ಟು ನಮ್ಮನ ತುಂಬಾ ಸಲ ಉಳಿಸುತ್ತೆ , ಮುಂದೆ ಆಗಬಹುದಾದ್ ಅವಘಡಗಳನ್ನ ತಪ್ಪಿಸುತ್ತೆ , ಅದು ಮಾಡಿರೋದು ಅನುಭವಿಗಳಿಂದ ಅಂತ ಮರಿಬಾರದು ಅಲ್ವಾ ? . ಇವಳೇನೋ ನಾನು ನನ್ನ ಸಂತೋಷ್ ಮುಖ್ಯ ಅಂತ ಹೋಗಿ ತನ್ನ ಕಾಲು ಮೇಲೆ ಕಲ್ಲು ಚಲ್ಲಿಕೋಬಾರದು ನೋಡಿ . ನನ್ನ ಜೀವದ ಗೆಳತಿ ಅವಳು . ಅವಳು ಸಂತೋಷವಾಗಿರಬೇಕು ಅಂತ ಯಾವತ್ತು ಬಯುಸುವಳು ನಾನು . ಅವಳ ಪ್ರತಿನಿತ್ಯ ನೋವು ದುಖಗಳನ್ನ ನನ್ನಲಿ ತೋಡಿ ಕೊಳ್ಳುತಾಳೆ ಅಂದ್ರೆ ನಾನು ಅವಳ ಜೀವನ ಅಸ್ಟು ಹಗುರಾಗಿ consider ಮಾಡೋಕೆ ಆಗೋಲ್ಲ . ಬರಿ ಕೌನ್ಸೆಲಿಂಗ್ ಕೊಟ್ಟು ಅವಳ ಕೈ ಬಿಡೋಕೆ ಆಗೋಲ್ಲ ಅಲ್ವಾ ? ನೋಡೋಣ ಮುಂದೆ ಏನಾಗುತ್ತದೆ .

ಮನಸಾರೆManasaarehttps://www.blogger.com/profile/06846364488667308472noreply@blogger.comtag:blogger.com,1999:blog-4790106144508237634.post-25184867384826160432010-03-28T06:55:07.114-07:002010-03-28T06:55:07.114-07:00ಆ ಮುಸ್ಲಿಂ ಹುಡುಗ ಎಂಥವನೋ ಗೊತ್ತಿಲ್ಲದೇ ಬಿಟ್ಟಿ ಸಲಹೆ ಕೊಡ...ಆ ಮುಸ್ಲಿಂ ಹುಡುಗ ಎಂಥವನೋ ಗೊತ್ತಿಲ್ಲದೇ ಬಿಟ್ಟಿ ಸಲಹೆ ಕೊಡುವುದು ಕಷ್ಟ. ಮದುವೆಯಾಗುವ ಮೊದಲು ಧೈರ್ಯ ತೋರಿಸದೇ ಈಗ ಬಂದು ಬಿರುಗಾಳಿ ಎಬ್ಬಿಸುವುದು ತಪ್ಪು ಎಂದು ನೀವನ್ನುತ್ತೀರೇನೋ. ಆದರೆ ನನಗ್ಯಾಕೋ ಹಾಗನ್ನಿಸುತ್ತಿಲ್ಲ. ಮದುವೆಗೆ ಮೊದಲೂ, ನಂತರಕ್ಕೂ ಇರುವ ವ್ಯತ್ಯಾಸವೆಂದರೆ ಸೆಕ್ಸ್ ಮತ್ತು ಮಕ್ಕಳು ಮಾತ್ರ.

ನಾನು ಹೇಳುವುದನ್ನು ಕೇಳಿದರೆ, ನನಗೇ ಮಾನಸಿಕ ವೈದ್ಯರ ಅಗತ್ಯವಿದೆ ಎಂದು ಮಡಿವಂತ ಬ್ಲಾಗಿಗರು ನಿರ್ಧರಿಸಬಹುದೇನೋ! ಆದರೂ ನನಗನ್ನಿಸಿದ್ದನ್ನು ಹೇಳಿಬಿಡುತ್ತೇನೆ!

ನಿಜಕ್ಕೂ ಆ ಹುಡುಗ ಆಕೆಯ ಮಕ್ಕಳನ್ನೂ ಜವಾಬ್ದಾರಿಯಿಂದ ನೋಡಿಕೊಳ್ಳಲು ತಯಾರಿದ್ದರೆ ಆಕೆ ಆ ಹುಡುಗನ ಹಿಂದೆ ಹೋಗುವುದೇ ಸರಿಯಾದುದೆಂದು ನನ್ನ ಅಭಿಪ್ರಾಯ. ಇರುವ ನಾಲ್ಕು ದಿನದಲ್ಲಿ ಇಷ್ಟವಿಲ್ಲದವನ ಜೊತೆ ಬದುಕುವುದಕ್ಕಿಂತ ಧೈರ್ಯವಾಗಿ ನಮಗೆ ಬೇಕಾದಂತೆ ಬದುಕುವ ಪರಿಸ್ಥಿತಿ ನಮ್ಮ ಮಧ್ಯೆ ಎಂದು ಬರುತ್ತದೋ ಗೊತ್ತಿಲ್ಲ. ಬೇಜವಾಬ್ದಾರಿ ಗಂಡಸರಿಗೆ (ಮತ್ತು ಹೆಂಗಸರಿಗೆ) ಸಮಾಜವೆಂಬುದು ಇವತ್ತು ಶ್ರೀರಕ್ಷೆ. ಹೇಗೂ ಸಮಾಜವನ್ನೆದುರಿಸಿ ಬೇರೆಯಾಗಲಾರರು ಎಂಬ ಭಂಡ ಧೈರ್ಯಕ್ಕೆ ಬಿದ್ದು ಜೊತೆಗಿರುವ ಜೀವವನ್ನು ಪ್ರೀತಿಸದೇ, ಗೌರವವಿಲ್ಲದೇ ನೋಡಿಯೂ ಪಾರಾಗಿಬಿಡುತ್ತಾರೆ. ಆಕೆಯ ಸಂತ್ರಸ್ತ ಬದುಕಿಗೆ ನೀವಾಗಲೀ, ನಿಮ್ಮ ಗಂಡನಾಗಲೀ, ಆತ ಕೊಡಿಸಬಹುದಾದ counseling ಆಗಲೀ ಉತ್ತರವಾಗಲಾರದು. (ನೆನಪಿರಲಿ, ಆ ಹುಡುಗ ಹೇಗಿದ್ದಾನೆಂದು ಗೊತ್ತಿಲ್ಲದೇ ಈ ಮಾತನ್ನು ಹೇಳುತ್ತಿದ್ದೇನೆ. ಆತ ಮೊದಲು ನಡೆದುಕೊಂಡ ರೀತಿ ಆತನ ಸ್ವಭಾವಕ್ಕೆ ಮಾನದಂಡವಾಗಲಾರದು. ದೇವರೆನ್ನುವವನಿದ್ದರೆ, ಆ ಹೆಣ್ಣುಮಗಳಿಗೆ ಸ್ವಂತ ನಿರ್ಧಾರಕ್ಕೆ ಬಧ್ಧನಾಗುವ ಧೈರ್ಯ ಕೊಡಲಿ, ಕೊನೆಗೂ ನಿರ್ಧರಿಸಬೇಕಾದದ್ದು ಆಕೆಯೇ)ಸುಪ್ತವರ್ಣhttps://www.blogger.com/profile/11480318076114768788noreply@blogger.com