Thursday, April 1, 2010

ರವಿ ಬೆಳೆಗೆರೆ ಸರ್ ಹೇಳಿದ " ಈಗ ಬೇಡ" ಅನ್ನೋ ಮಂತ್ರ

ರವಿ ಬೆಳೆಗೆರೆ ಬರಹಗಳೆಂದರೆ ತುಂಬಾ ಇಷ್ಟ . ಆ ಬರಹಗಳು ತೀರ ಬದುಕಿಗೆ ಸಂಬಧಿಸಿದ ವಿಷಯಗಳನ್ನ ಮನಮುಟ್ಟುವಂತೆ ಹೇಳುತ್ತವೆ . ಎಲ್ಲರಿಗೂ ಗೊತ್ತಿದ್ದ ಸಣ್ಣ ಸಣ್ಣ , ಸೂಕ್ಷ್ಮ ಸಂಗತಿಗಳನ್ನೇ ಬರೆದರೂ ಅದರಲ್ಲಿ ಒಂದು ಒಳ್ಳೆಯ ಸಂದೇಶ್ ಇರುತ್ತವೆ .
ತಮ್ಮ ತಪ್ಪುಗಳನ್ನೇ ಎತ್ತಿ ಹೇಳೋವ್ ದಿಟ್ಟ ಪೆನ್ನು ಅವರಲ್ಲಿದೆ ಅನ್ನೋದು ನನ್ನ ಅನಿಸಿಕೆ . ಹಾಗಂತ್ ಅವರ ಎಲ್ಲ ಬರಹ , ಹೇಳಿಕೆ ನಾನು ಒಪ್ಪಿಕೊಳ್ಳಲಾರೆ ಅಂತಹ ಬರಹಗಳಿಗೆ ನನ್ನ ಟೀಕೆ ಸದಾ ಸಿದ್ದವಗಿರುತ್ತವೆ .
ಡಿ. ವಿ . ಜಿ ಅವರ ಮಂಕು ತಿಮ್ಮ ಬಿಟ್ರೆ ನಂಗೆ ರವಿ ಸರ್ ಅವರ ಲೇಖನಗಳೇ ಅಚ್ಚು ಮೆಚ್ಚು . ಮೊನ್ನೆ ಜಯನಗರದ " ಟೋಟಲ್ ಕನ್ನಡ ಡಾಟ್ ಕಂ " ಗೆ ಭೆಟ್ಟಿ ನಿಡಿದಾಗ ಅಲ್ಲಿರುವ ಅವರ ಬುಕ್ಕುಗಳನ್ನ ಮಾತ್ರ ಬಿಟ್ಟು ಹಾಗೆ ಬರಲಾಗಲಿಲ್ಲ .
ಅವರ " ಹಾಯ್ ಬೆಂಗಳೂರ " ಪತ್ರಿಕೆಯ ನನ್ನ ಅಚ್ಚು ಮೆಚ್ಚಿನ ಕಾಲಂಗಳಾದ "ಬಾಟಮ್ ಐಟಂ " , " ಖಾಸಬಾತ್ " ಗಳ collection ನೋಡಿ ತುಂಬಾ ಖುಷಿ ಆಯ್ತು . ಆ ಎಲ್ಲ collection ನನ್ನ ಮನೆಯ ಬುಕ್ ಶೆಲ್ಫ್ ನಲ್ಲಿ ರಾರಾಜಿಸುತ್ತಿವೆ .
ಹೀಗೆ ಅವರ ಲೇಖನಗಳನ್ನು ಓದುತ್ತಿದ್ದಗ್ ಕೆಳಗೆ ಬರೆದ ಅವರ ಸಾಲುಗಳು ನನ್ನ ಗೆಳತಿಗಾಗಿಯೇ ಅನ್ನೋವಸ್ತು ಹತ್ತಿರವಾಗಿವೆ . ನನ್ನ ಗೆಳತಿಯರ್ ಅಂತವರ್ ಜೀವನಕ್ಕೆ ನಿಜಕ್ಕೂ ಒಳ್ಳೆ ದಾರಿ ತೋರುವ ಲೇಖನಗಳು .

" ಬಾಟಮ್ ಐಟಂ ೩ " ಯಲ್ಲಿ ಪ್ರಕಟ ವಾದ ಲೇಖನ " ಏಕಾಂತ್ ವೆಂಬ ಮೋಹದ ಸೆಳೆತ " ಸಾರಾಂಶ್ ( ಪೂರ್ತಿ ಲೇಖನಕ್ಕಾಗಿ ಬುಕ್ ರೆಫರ್ ಮಾಡಿ )
" ಚೆಂದದ ಮಕ್ಕಳು , ನೆಮ್ಮದಿಯ ಮನೆ, ಸಂಸಾರ್ ಇರೋವ ಕೆಲವು ಹೆಣ್ಣುಮಕ್ಕಳು ವಿನಾಕಾರನ್ ದಾರಿ ತಪ್ಪಿ ಬಿಡುತ್ತಾರೆ . ಯಾರೋ ಕೆಲಸಕ್ಕೆ ಬಾರದವನ್ ಜೊತೆ ಅನೈತಿಕ ಸಂಬಂದ ಇಟ್ಟುಕೊಳ್ಳುತ್ತಾರೆ . ಅವರ ಪ್ರಕಾರ್ ಇದು ವಿನಾಕಾರಣ ಮಾಡಿಕೊಂಡ ರಗಳೆ ಅಲ್ಲ , ಅದು ಹೆಣ್ಣು ಮಕ್ಕಳು ಸರಿಯಾಗಿ handle ಮಾಡಿರದ ಮದ್ಯಾಹ್ನದ ಏಕಾಂತ್ . ಇದಕ್ಕೆ ಕಾರಣ ಯಾರು ಇಲ್ಲದಾಗ್ ಜಾಗೃತವಾಗಿ ಬಿಡುವ negative thinking , ಸ್ವೇಚ್ಚೆಯಾ ಆಸೆ , ತಾನು ಒಬ್ಬಂಟಿ ಎನ್ನುವ ಫಾಲ್ಸ್ ಫೀಲಿಂಗ್ , ಗಂಡನಲ್ಲೇನೋ ಕೊರತೆ ಇದೆ ಅನ್ನುವ ಸುಳ್ಳು ದೂರುಗಳು . ಈ ಬದುಕನ್ನು ಹೀಗೆ ಕಳಿದು ಬಿಡಬೇಕಾ ಅನ್ನೋ ಸೆಲ್ಫ್ ಪಿಟಿ "

ಅವರ ಈ ಮಾತಿನಲ್ಲಿ ನಿಜವಾಗಿಯೂ ಸತ್ಯ ಅಡಗಿದೆ . ಅದನ್ನ ನಾನು ತುಂಬಾ ಹತ್ತಿರದಿಂದ ನೋಡ್ತಾ ಇದ್ದೀನಿ ಅನ್ನೋ ಫೀಲಿಂಗ್ ನಂಗೆ . ಇಂತಹ ಅವಗಡಗಳಿಗೆ ಅವರು ಕೊಟ್ಟ ಸಲಹೆ ಅಂದ್ರೆ ನಾವು ನೀವು ಹೇಳಿದಾ ಹಾಗೆ " ಬ್ಯುಸಿ ಆಗಿಬಿಡೋದು "
ಅವರು ಪ್ರಕಾರ್ ಇಂಥ ಕ್ಷಣಗಳನ್ನ ಸೋಲಿಸೋ ಮಂತ್ರ ಅಂದ್ರೆ ತುಂಬಾ ಇಂಟರೆಸ್ಟಿಂಗ್ ಆಗಿರೋ ಬುಕ್ ಓದಬೇಕು , ಇಲ್ಲ ಸಿನಿಮಾಕ್ಕೆ ಹೋಗಬೇಕು , ಇಲ್ಲ ಯಾರಾದ್ರೂ ಜೊತೆ ಫೋನ್ ನಲ್ಲಿ ಹರಟಬೇಕು, ಇಲ್ಲ ಮನೇಲಿ ಇರೋ ಪೆಟ್ ಜೊತೆ ಕಾಲ ಕಳಿಬೇಕು, ಒಂದರ್ಥದಲ್ಲಿ ಇಂತ ಬಲಹೀನ ಕ್ಷಣಗಳನ್ನ ಬೇರೆ ಎದರಲ್ಲದರೂ ಬ್ಯುಸಿ ಆಗಿ avoid ಮಾಡಬೇಕು . ಎಷ್ಟು ಸಿಂಪಲ್ ಹಾಗೋ ಎಷ್ಟು ಕರೆಕ್ಟ್ ಆದ solution ಅಲ್ವಾ ?

ಅವರ ಇನ್ನೊಂದು ಲೇಖನದಲ್ಲಿ ಹೇಳಿದ ಮಂತ್ರ ಅಂತ ವರ್ಕ್ ಆಗೋದುದರಲ್ಲಿ ಸಂಶಯನೇ ಇಲ್ಲ

" ಬಲಹೀನ ಕ್ಷಣವೊಂದರ ಶಕ್ತಿಯುತ ಮಂತ್ರ : "ಈಗ ಬೇಡ!"
ಬಲಹೀನ ಕ್ಷಣವೊಂದನ್ನ ಸರಿಯಾಗಿ handle ಮಾಡದ ಕಾರಣ ಗೃಹಿಣಿ ಒಬ್ಬಳು ತಪ್ಪು ದಾರಿ ಹಿಡಿಯುತ್ತಾಳೆ . ಅದು ತಪ್ಪು ಅಂತ ಗೊತ್ತಿದ್ದರು ಆ ಬಲಹೀನ ಕ್ಷಣವನ್ನ ಗೆಲ್ಲೋಕಾಗದೆ ಮತ್ತೆ ಮತ್ತೆ ಅದೇ ತಪ್ಪು ಅವಳಿಂದ ಆಗಿಬಿಡುತ್ತೆ . ಇಂತ ಬಲಹೀನ ಕ್ಷಣಗಳ ಅಪರಾಧವನ್ನ ಗೆಲ್ಲೋಕೆ ತುಂಬಾ strength ಬೇಕು ಅನ್ನೋ ಅವರ ಹೇಳಿಕೆ ಸರಿಯಾಗಿದೆ. ಅದನ್ನ ಗೆಲ್ಲುಬೇಕು ಅಂದ್ರೆ ನಮ್ಮ ಮೇಲೆ ನಮಗೆ ಹಿಡಿತ ಬೇಕು , ಅದಕ್ಕೆ ಅವರು ಹೇಳೋದು " ನಿಗ್ರಹ " ಅಥವಾ "postpone " . ಇನ್ನು ಅವರ ಪ್ರಕಾರ್
"ಇವೊತ್ತೇ ಲಾಸ್ಟು , ಇನ್ನ್ಯಾವತ್ತು ಇಂತ ತಪ್ಪು ಮಾಡೋಲ್ಲ " ಅಂತ ಹೇಳೋದೇ ಬಲಹಿನತೆ . ಎಷ್ಟು ನಿಜ ಅಲ್ವಾ . ಇನ್ನೊಮ್ಮೆ ಮಾಡಲ್ಲ ಅನ್ನೋ ಮನಸ್ಸಿನ ಮನಸ್ಸು ಮತ್ತೆ ಯಾವಾಗ್ ಮಾಡೋದು ಅಂತ ತುಡಿಯುತ್ತ ಇರುತ್ತೆ . ಅದಕ್ಕೆ ಅವರು ಹೇಳೋ ಮಂತ್ರ "ಈಗ ಮಾಡೋದು ಬ್ಯಾಡ , ಇವತ್ತು ಮಾಡೋದು ಬೇಡ " ಅಂತ ಕರಾರುವಕ್ಕಾಗಿ ಮನಸ್ಸಿಗೆ ಹೇಳೋದು . ಅಂದ್ರೆ ಮಾಡೋ ತಪ್ಪನ " ಪೋಸ್ಟ್ ಪೋನ್ " ಮಾಡೋದು . ಇದೊಂದು ಅದ್ಭುತ ದಿವ್ಯ ಮಂತ್ರ . ನಿಜ ಒಮ್ಮೆ ಮಾಡಿ ನೋಡಿ , ವರ್ಕ್ ಆಗುತ್ತೆ .
ಅವರ ಪ್ರಕಾರ್ " ಸುಖವನ್ನು ನಿರಕರಿಸೋದು ಸುಲಭ ಅಲ್ಲ . ಸುಮಾರು ತಪ್ಪಗಳು , ಅವಘಡಗಳು ಸುಖದ ಸುತ್ತಲೇ ಸಂಭವಿಸಿರುತ್ತವೆ " . ಈ ಮಾತುಗಳನ್ನ ನಾನು ಖಂಡಿತ ಒಪ್ಪುತ್ತೇನೆ . ನನ್ನ ಗೆಳತಿಯ ಜೀವನದಲ್ಲಿ ನಡೆಯುತ್ತಿರುವ / ನಡೆಯ ಬಹುದಾದ ಅವಘಡಗಳು ಅವಳಿಗೆ ಅದರಲ್ಲಿ ಸುಖ ಸಿಗ್ತಾ ಇದೆ ಅನ್ನೋ ಕಾರಣಕ್ಕೆ ಮಾತ್ರ ಅಲ್ವಾ . ಎಷ್ಟು ಸತ್ಯದ ಮಾತು ಅವರದು , ಅದರ ಜೊತೆ ಕೊಟ್ಟ ಈ " ಪೋಸ್ಟ್ ಪೋನಿಂಗ್ " ಮಂತ್ರ ಅಸ್ತೆ ಪವರ್ಫುಲ್ .
ಇವೊತ್ತೇ ಅವಳಿಗೆ ಈ ಮಂತ್ರ ಹೇಳ್ತೀನಿ . ಖಂಡಿತ ವರ್ಕ್ ಆಗುತ್ತೆ ಅನ್ನೋ ನಂಬಿಕೆ ನನಗಿದೆ . ಅದರ ಜೊತೆ ಅವಳಿಗೆ ಅಂತ ರವಿ ಬೆಳೆಗೆರೆ ಬುಕ್ ಗಳನ್ನ ತಂದಿದೀನಿ . ಅವರು ಕೊಡುವ guidance ಹೆಲ್ಪ್ ಆಗುತ್ತೆ ಅಂತ ಭರವಸೆ ಇದೆ .

( ಇದು ನನ್ನ ಹಿಂದಿನ ಲೇಖನದ ಮುಂದುವರಿಕೆ )