ರವಿ ಬೆಳೆಗೆರೆ ಬರಹಗಳೆಂದರೆ ತುಂಬಾ ಇಷ್ಟ . ಆ ಬರಹಗಳು ತೀರ ಬದುಕಿಗೆ ಸಂಬಧಿಸಿದ ವಿಷಯಗಳನ್ನ ಮನಮುಟ್ಟುವಂತೆ ಹೇಳುತ್ತವೆ . ಎಲ್ಲರಿಗೂ ಗೊತ್ತಿದ್ದ ಸಣ್ಣ ಸಣ್ಣ , ಸೂಕ್ಷ್ಮ ಸಂಗತಿಗಳನ್ನೇ ಬರೆದರೂ ಅದರಲ್ಲಿ ಒಂದು ಒಳ್ಳೆಯ ಸಂದೇಶ್ ಇರುತ್ತವೆ .
ತಮ್ಮ ತಪ್ಪುಗಳನ್ನೇ ಎತ್ತಿ ಹೇಳೋವ್ ದಿಟ್ಟ ಪೆನ್ನು ಅವರಲ್ಲಿದೆ ಅನ್ನೋದು ನನ್ನ ಅನಿಸಿಕೆ . ಹಾಗಂತ್ ಅವರ ಎಲ್ಲ ಬರಹ , ಹೇಳಿಕೆ ನಾನು ಒಪ್ಪಿಕೊಳ್ಳಲಾರೆ ಅಂತಹ ಬರಹಗಳಿಗೆ ನನ್ನ ಟೀಕೆ ಸದಾ ಸಿದ್ದವಗಿರುತ್ತವೆ .
ಡಿ. ವಿ . ಜಿ ಅವರ ಮಂಕು ತಿಮ್ಮ ಬಿಟ್ರೆ ನಂಗೆ ರವಿ ಸರ್ ಅವರ ಲೇಖನಗಳೇ ಅಚ್ಚು ಮೆಚ್ಚು . ಮೊನ್ನೆ ಜಯನಗರದ " ಟೋಟಲ್ ಕನ್ನಡ ಡಾಟ್ ಕಂ " ಗೆ ಭೆಟ್ಟಿ ನಿಡಿದಾಗ ಅಲ್ಲಿರುವ ಅವರ ಬುಕ್ಕುಗಳನ್ನ ಮಾತ್ರ ಬಿಟ್ಟು ಹಾಗೆ ಬರಲಾಗಲಿಲ್ಲ .
ಅವರ " ಹಾಯ್ ಬೆಂಗಳೂರ " ಪತ್ರಿಕೆಯ ನನ್ನ ಅಚ್ಚು ಮೆಚ್ಚಿನ ಕಾಲಂಗಳಾದ "ಬಾಟಮ್ ಐಟಂ " , " ಖಾಸಬಾತ್ " ಗಳ collection ನೋಡಿ ತುಂಬಾ ಖುಷಿ ಆಯ್ತು . ಆ ಎಲ್ಲ collection ನನ್ನ ಮನೆಯ ಬುಕ್ ಶೆಲ್ಫ್ ನಲ್ಲಿ ರಾರಾಜಿಸುತ್ತಿವೆ .
ಹೀಗೆ ಅವರ ಲೇಖನಗಳನ್ನು ಓದುತ್ತಿದ್ದಗ್ ಕೆಳಗೆ ಬರೆದ ಅವರ ಸಾಲುಗಳು ನನ್ನ ಗೆಳತಿಗಾಗಿಯೇ ಅನ್ನೋವಸ್ತು ಹತ್ತಿರವಾಗಿವೆ . ನನ್ನ ಗೆಳತಿಯರ್ ಅಂತವರ್ ಜೀವನಕ್ಕೆ ನಿಜಕ್ಕೂ ಒಳ್ಳೆ ದಾರಿ ತೋರುವ ಲೇಖನಗಳು .
" ಬಾಟಮ್ ಐಟಂ ೩ " ಯಲ್ಲಿ ಪ್ರಕಟ ವಾದ ಲೇಖನ " ಏಕಾಂತ್ ವೆಂಬ ಮೋಹದ ಸೆಳೆತ " ಸಾರಾಂಶ್ ( ಪೂರ್ತಿ ಲೇಖನಕ್ಕಾಗಿ ಬುಕ್ ರೆಫರ್ ಮಾಡಿ )
" ಚೆಂದದ ಮಕ್ಕಳು , ನೆಮ್ಮದಿಯ ಮನೆ, ಸಂಸಾರ್ ಇರೋವ ಕೆಲವು ಹೆಣ್ಣುಮಕ್ಕಳು ವಿನಾಕಾರನ್ ದಾರಿ ತಪ್ಪಿ ಬಿಡುತ್ತಾರೆ . ಯಾರೋ ಕೆಲಸಕ್ಕೆ ಬಾರದವನ್ ಜೊತೆ ಅನೈತಿಕ ಸಂಬಂದ ಇಟ್ಟುಕೊಳ್ಳುತ್ತಾರೆ . ಅವರ ಪ್ರಕಾರ್ ಇದು ವಿನಾಕಾರಣ ಮಾಡಿಕೊಂಡ ರಗಳೆ ಅಲ್ಲ , ಅದು ಹೆಣ್ಣು ಮಕ್ಕಳು ಸರಿಯಾಗಿ handle ಮಾಡಿರದ ಮದ್ಯಾಹ್ನದ ಏಕಾಂತ್ . ಇದಕ್ಕೆ ಕಾರಣ ಯಾರು ಇಲ್ಲದಾಗ್ ಜಾಗೃತವಾಗಿ ಬಿಡುವ negative thinking , ಸ್ವೇಚ್ಚೆಯಾ ಆಸೆ , ತಾನು ಒಬ್ಬಂಟಿ ಎನ್ನುವ ಫಾಲ್ಸ್ ಫೀಲಿಂಗ್ , ಗಂಡನಲ್ಲೇನೋ ಕೊರತೆ ಇದೆ ಅನ್ನುವ ಸುಳ್ಳು ದೂರುಗಳು . ಈ ಬದುಕನ್ನು ಹೀಗೆ ಕಳಿದು ಬಿಡಬೇಕಾ ಅನ್ನೋ ಸೆಲ್ಫ್ ಪಿಟಿ "
ಅವರ ಈ ಮಾತಿನಲ್ಲಿ ನಿಜವಾಗಿಯೂ ಸತ್ಯ ಅಡಗಿದೆ . ಅದನ್ನ ನಾನು ತುಂಬಾ ಹತ್ತಿರದಿಂದ ನೋಡ್ತಾ ಇದ್ದೀನಿ ಅನ್ನೋ ಫೀಲಿಂಗ್ ನಂಗೆ . ಇಂತಹ ಅವಗಡಗಳಿಗೆ ಅವರು ಕೊಟ್ಟ ಸಲಹೆ ಅಂದ್ರೆ ನಾವು ನೀವು ಹೇಳಿದಾ ಹಾಗೆ " ಬ್ಯುಸಿ ಆಗಿಬಿಡೋದು "
ಅವರು ಪ್ರಕಾರ್ ಇಂಥ ಕ್ಷಣಗಳನ್ನ ಸೋಲಿಸೋ ಮಂತ್ರ ಅಂದ್ರೆ ತುಂಬಾ ಇಂಟರೆಸ್ಟಿಂಗ್ ಆಗಿರೋ ಬುಕ್ ಓದಬೇಕು , ಇಲ್ಲ ಸಿನಿಮಾಕ್ಕೆ ಹೋಗಬೇಕು , ಇಲ್ಲ ಯಾರಾದ್ರೂ ಜೊತೆ ಫೋನ್ ನಲ್ಲಿ ಹರಟಬೇಕು, ಇಲ್ಲ ಮನೇಲಿ ಇರೋ ಪೆಟ್ ಜೊತೆ ಕಾಲ ಕಳಿಬೇಕು, ಒಂದರ್ಥದಲ್ಲಿ ಇಂತ ಬಲಹೀನ ಕ್ಷಣಗಳನ್ನ ಬೇರೆ ಎದರಲ್ಲದರೂ ಬ್ಯುಸಿ ಆಗಿ avoid ಮಾಡಬೇಕು . ಎಷ್ಟು ಸಿಂಪಲ್ ಹಾಗೋ ಎಷ್ಟು ಕರೆಕ್ಟ್ ಆದ solution ಅಲ್ವಾ ?
ಅವರ ಇನ್ನೊಂದು ಲೇಖನದಲ್ಲಿ ಹೇಳಿದ ಮಂತ್ರ ಅಂತ ವರ್ಕ್ ಆಗೋದುದರಲ್ಲಿ ಸಂಶಯನೇ ಇಲ್ಲ
" ಬಲಹೀನ ಕ್ಷಣವೊಂದರ ಶಕ್ತಿಯುತ ಮಂತ್ರ : "ಈಗ ಬೇಡ!"
ಬಲಹೀನ ಕ್ಷಣವೊಂದನ್ನ ಸರಿಯಾಗಿ handle ಮಾಡದ ಕಾರಣ ಗೃಹಿಣಿ ಒಬ್ಬಳು ತಪ್ಪು ದಾರಿ ಹಿಡಿಯುತ್ತಾಳೆ . ಅದು ತಪ್ಪು ಅಂತ ಗೊತ್ತಿದ್ದರು ಆ ಬಲಹೀನ ಕ್ಷಣವನ್ನ ಗೆಲ್ಲೋಕಾಗದೆ ಮತ್ತೆ ಮತ್ತೆ ಅದೇ ತಪ್ಪು ಅವಳಿಂದ ಆಗಿಬಿಡುತ್ತೆ . ಇಂತ ಬಲಹೀನ ಕ್ಷಣಗಳ ಅಪರಾಧವನ್ನ ಗೆಲ್ಲೋಕೆ ತುಂಬಾ strength ಬೇಕು ಅನ್ನೋ ಅವರ ಹೇಳಿಕೆ ಸರಿಯಾಗಿದೆ. ಅದನ್ನ ಗೆಲ್ಲುಬೇಕು ಅಂದ್ರೆ ನಮ್ಮ ಮೇಲೆ ನಮಗೆ ಹಿಡಿತ ಬೇಕು , ಅದಕ್ಕೆ ಅವರು ಹೇಳೋದು " ನಿಗ್ರಹ " ಅಥವಾ "postpone " . ಇನ್ನು ಅವರ ಪ್ರಕಾರ್
"ಇವೊತ್ತೇ ಲಾಸ್ಟು , ಇನ್ನ್ಯಾವತ್ತು ಇಂತ ತಪ್ಪು ಮಾಡೋಲ್ಲ " ಅಂತ ಹೇಳೋದೇ ಬಲಹಿನತೆ . ಎಷ್ಟು ನಿಜ ಅಲ್ವಾ . ಇನ್ನೊಮ್ಮೆ ಮಾಡಲ್ಲ ಅನ್ನೋ ಮನಸ್ಸಿನ ಮನಸ್ಸು ಮತ್ತೆ ಯಾವಾಗ್ ಮಾಡೋದು ಅಂತ ತುಡಿಯುತ್ತ ಇರುತ್ತೆ . ಅದಕ್ಕೆ ಅವರು ಹೇಳೋ ಮಂತ್ರ "ಈಗ ಮಾಡೋದು ಬ್ಯಾಡ , ಇವತ್ತು ಮಾಡೋದು ಬೇಡ " ಅಂತ ಕರಾರುವಕ್ಕಾಗಿ ಮನಸ್ಸಿಗೆ ಹೇಳೋದು . ಅಂದ್ರೆ ಮಾಡೋ ತಪ್ಪನ " ಪೋಸ್ಟ್ ಪೋನ್ " ಮಾಡೋದು . ಇದೊಂದು ಅದ್ಭುತ ದಿವ್ಯ ಮಂತ್ರ . ನಿಜ ಒಮ್ಮೆ ಮಾಡಿ ನೋಡಿ , ವರ್ಕ್ ಆಗುತ್ತೆ .
ಅವರ ಪ್ರಕಾರ್ " ಸುಖವನ್ನು ನಿರಕರಿಸೋದು ಸುಲಭ ಅಲ್ಲ . ಸುಮಾರು ತಪ್ಪಗಳು , ಅವಘಡಗಳು ಸುಖದ ಸುತ್ತಲೇ ಸಂಭವಿಸಿರುತ್ತವೆ " . ಈ ಮಾತುಗಳನ್ನ ನಾನು ಖಂಡಿತ ಒಪ್ಪುತ್ತೇನೆ . ನನ್ನ ಗೆಳತಿಯ ಜೀವನದಲ್ಲಿ ನಡೆಯುತ್ತಿರುವ / ನಡೆಯ ಬಹುದಾದ ಅವಘಡಗಳು ಅವಳಿಗೆ ಅದರಲ್ಲಿ ಸುಖ ಸಿಗ್ತಾ ಇದೆ ಅನ್ನೋ ಕಾರಣಕ್ಕೆ ಮಾತ್ರ ಅಲ್ವಾ . ಎಷ್ಟು ಸತ್ಯದ ಮಾತು ಅವರದು , ಅದರ ಜೊತೆ ಕೊಟ್ಟ ಈ " ಪೋಸ್ಟ್ ಪೋನಿಂಗ್ " ಮಂತ್ರ ಅಸ್ತೆ ಪವರ್ಫುಲ್ .
ಇವೊತ್ತೇ ಅವಳಿಗೆ ಈ ಮಂತ್ರ ಹೇಳ್ತೀನಿ . ಖಂಡಿತ ವರ್ಕ್ ಆಗುತ್ತೆ ಅನ್ನೋ ನಂಬಿಕೆ ನನಗಿದೆ . ಅದರ ಜೊತೆ ಅವಳಿಗೆ ಅಂತ ರವಿ ಬೆಳೆಗೆರೆ ಬುಕ್ ಗಳನ್ನ ತಂದಿದೀನಿ . ಅವರು ಕೊಡುವ guidance ಹೆಲ್ಪ್ ಆಗುತ್ತೆ ಅಂತ ಭರವಸೆ ಇದೆ .
( ಇದು ನನ್ನ ಹಿಂದಿನ ಲೇಖನದ ಮುಂದುವರಿಕೆ )
ರಾಜ್ಯೋತ್ಸವ ಅದುವೇ ರಾಷ್ಟ್ರೋತ್ಸವ
14 hours ago
Manasaare-
ReplyDeleteಹೌದು ಆ ದಿವ್ಯ ಮಂತ್ರ ಸರಿಯಾಗಿದೆ..
ಯಾಕೆಂದರೆ, " ಯಾರು ಭೂತಕಾಲದಲ್ಲಿ ತಪ್ಪೆಸಗುತ್ತಾರೋ ಅವರು ಭವಿಷ್ಯಕಾಲದಲ್ಲಿ ಶಿಕ್ಷಿಸಲ್ಪಡುತ್ತಾರೆ.."
ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/
ನಾನೂ ಸಹ ಬೆಳೆಗೆರೆ ಸರ್ ಫ್ಯಾನ್, a .c . ಎಲ್ಲಾ...... ಅವರ ಬರಹಗಳು ತುಂಬಾ ಸ್ಫೂರ್ತಿ ಕೊಡುತ್ತವೆ.... ನೀವು ಹೇಳಿದ ಹಾಗೆ , ನಿಮ್ಮ ಗೆಳತಿಗೆ ಅವರ ಪುಸ್ತಕ ಕೊಡಿ...... '' ಕಳ್ಳ ಸುಖಕ್ಕೆ, ಮಳ್ಳು ಕೆಲಸಕ್ಕೆ ' ಈಗ ಬೇಡ' ಎಂಬ ಸೂತ್ರ ಸರಿಯಾಗಿದೆ..... ಅಂದ ಹಾಗೆ, 'ಬಾಟಮ್ ಐಟಂ , ಖಾಸ್ ಬಾತ್' ' ಬರೋದುhi ಬೆಂಗಳೂರಲ್ಲಿ ಆಲ್ವಾ....
ReplyDeleteಮನಸಾರೆಯವರೇ...ರವಿ ಬೆಳಗೆರೆ...ನನಗೆ ಅವರು ಕಸ್ತೂರಿಯಲ್ಲಿದ್ದಾಗಿನ ಹಳೆ ಪರಿಚಯ...(ಅವರಿಗೆ ನೆನಪಿರಲಿಕ್ಕಿಲ್ಲ...ಹಹಹ)..ನಾನು ನನ್ನ Aquatic science ಬರಹಗಳನ್ನು ಸುಮಾರು ೫-೬ ಪ್ರಕಟಿಸಿದ್ದ ಸಮಯ ಅದು (1984-88) ...ಹೌದು ಅವರ ವಿಚಾರ ಮಂಡನೆ ಆಸಕ್ತಿ ಹುಟ್ಟಿಸುತ್ತೆ...
ReplyDeleteಅಂದಹಾಗೆ..ನಿಮ್ಮ ಪೋಸ್ಟ್ ನಲ್ಲಿ ...ಹೌದು..ನೀವು ತಿಂಡಿ..ಊಟದ ಜೊತೆ ಕುರುಕುಲು ತಿನ್ನಲ್ವಾ...ಉಪ್ಪಿನಕಾಯಿ..?? ಊಹೂಂ..?!! ಯಾಕೆ....???
ಸಾರಿ ಎಲ್ಲೆಲ್ಲಿಗೋ ಹೋದೆ...ನಿಮ್ಮ ಪೋಸ್ಟ್ ನಲ್ಲಿ ವ್ಯಂಜನವನ್ನ ಸ್ವರದ ಸಹಾಯವಿಲ್ಲದೇ ಬಳಸ್ತೀರಲ್ಲಾ...ಯಾಕೆ...?....ಲಿಂಕು ಗೊತಾಯ್ತಲ್ಲ ಈಗ...??!!ಹಹಹ...
ಅದರಲ್ಲಿ ಒಂದು ಒಳ್ಳೆಯ ಸಂದೇಶ್ ಇರುತ್ತವೆ
ಓದುತ್ತಿದ್ದಗ್ ಕೆಳಗೆ ಬರೆದ ಅವರ ಸಾಲುಗಳು
ಹೀಗೆ ಅವರ ಲೇಖನಗಳನ್ನು ಓದುತ್ತಿದ್ದಗ್ ಕೆಳಗೆ ಬರೆದ ಅವರ ಸಾಲುಗಳು
ಅವರ ಪ್ರಕಾರ್ " ಸುಖವನ್ನು ನಿರಕರಿಸೋದು ಸುಲಭ ಅಲ್ಲ
ನಾಲ್ಕು ಸಾಲುಗಳು ಮೇಲೆ...ಉದಾಹರಣೆ....ಅಲ್ಲ...ತಪ್ಪಲ್ಲ...ಇದರಿಂದ ವಿಶೇಷ ಎಫೆಕ್ಟ್ ಇದ್ರೆ ಹೇಳೀಪಾ ನಾನೂ ಬಳಸ್ತೀನಿ..? ಇಲ್ಲ ಮೈಲ್ ಮಾಡಿ..ನಿಮ್ಮ ಸೀಕ್ರೇಟು...
ನಿಮ್ಮ ಮಂತ್ರ ಸರಿಯೆನಿಸುತ್ತೆ...
ReplyDeleteನನ್ನ ಗೆಳೆಯರ ಮಗಳೊಬ್ಬಳು ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಬಂದಿದೆ ಅಂತ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳಂತೆ. ಅವರು ನನಗೆ ಈ ವಿಚಾರವನ್ನು ಹೇಳಿದ್ದರು. ಆಗ ನಾನು ರವಿ ಬೆಳೆಗೆರೆಯವರು ಓ ಮನಸೆ ಪತ್ರಿಕೆಯಲ್ಲಿ ಮಗಳಿಗೆ...ತಂಗಿಗೆ ಸಾಂತ್ವಾನ ಹೇಳುವ ಲೇಖನವನ್ನು ಆ ಹುಡುಗಿಗೆ ತಲುಪಿಸಿದೆ. ಜೊತೆಗೊಂದಷ್ಟು ರವಿಬೆಳೆಗೆರೆ ಪುಸ್ತಕವನ್ನು ಕೊಟ್ಟೆ. ಆ ಹುಡುಗಿ ಈಗ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ...ರವಿಬೆಳೆಗೆರೆಯವರ ಪುಸ್ತಕಗಳು ಖಂಡಿತ ಕೆಲಸ ಮಾಡುತ್ತವೆ. ನನ್ನ ಬಳಿಯೂ ಓ ಮನಸೇ ಎಲ್ಲಾ ಸಂಚಿಕೆಗಳು ಇಟ್ಟಿದ್ಡೇನೆ. ಬೇಸರವಾದಾಗಲೆಲ್ಲಾ ಓದುತ್ತೇನೆ...ನಿಮ್ಮ ಗೆಳತಿಗೆ ನಿಮ್ಮ ಮಂತ್ರ ಖಂಡಿತ ಸರಿಯಾಗಬಹುದು...ಪ್ರಯತ್ನಿಸಿ...all the best..
ravi belegereyavara lekhana prayOjanavaagali. avara barahagalu kelasa maduttave.
ReplyDeleteನನಗೆ "ಇಲ್ಲ" ಅನ್ನಲು ಬಹಳ ಕಷ್ಟವಾಗುತ್ತಿತ್ತು..
ReplyDeleteನನ್ನ ತಮ್ಮ ನನಗೊಂದು ಪುಸ್ತಕ ಕೊಟ್ಟಿದ್ದಾನೆ...
ಅದು "ಹೌ ಟು ಸೆ .."ನೋ"
ಪೂರ್ತಿಯಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗಿದೆ..
ತುಂಬಾ ಒಳ್ಳೆಯ ಲೇಖನ...
ಎಲ್ಲರಿಗೂ ನನ್ನ ಧನ್ಯವಾದಗಳು .
ReplyDelete@ಗುರುದೆಸೆ : ಮಂತ್ರ ನಿಜಕ್ಕೂ ವರ್ಕ್ ಮಾಡುತ್ತೆ . ಇತ್ತಿತಲಾಗಿ ನಂಗೆ ದುಃಖ ಕೊಡುವ ವಿಷಯಗಳನ್ನು ಥಿಂಕ್ ಮಾಡೋದೇ ನಾನು " ಪೋಸ್ಟ್ ಪೊನ " ಮಾಡ್ತಾ ಇದ್ದೀನಿ .
@ದಿನಕರ ಸರ್
ನಂಗೆ ನೀವು ರವಿ ಬೆಳೆಗೆರೆ ಅವರ ಫ್ಯಾನ್ ಅಂತ ಗೊತ್ತು . ಸಾರೀ ರೀ ತಪ್ಪಾಗಿ mistake ಆಗಿ " ಹಾಯ್ ಬೆಂಗಳೂರು " ಬದಲಿ " ಓ ಮನಸ್ಸೇ " ಟೈಪ್ ಆಗಿ ಬಿಟ್ಟಿದೆ . ನಂಗು ಕನ್ಫ್ಯೂಸ್ ಆಗಿದೆ ಅನ್ನಿಸುತ್ತೆ ಹೆಹ್ಹೆಹ್
ಈ ಪೋಸ್ಟ್ ಎಡಿಟ್ ಮಾಡಿ ಸರಿ ಮಾಡ್ತೀನಿ , ಥ್ಯಾಂಕ್ಸ್ .
@ ಜಲನಯನ್ ಸಾರಿ ಜಲಾನಯನ ಸರ್,
ನಿಮ್ಮ ಕಾಮೆಂಟ್ ಓದಿದ ಮೇಲೆ ನನ್ನ ಪೋಸ್ಟ್ ಮತ್ತೊಮೆ ಓದಿದೆ . ಸ್ವರಗಳಿಲ್ಲದ ವ್ಯಂಜನಗಳ ಉಚ್ಹಾರ್ ಹೇಗೆ ಇರುತ್ತೆ ಅಂತ ಗೊತ್ತಾಗಿ ನಕ್ಕು ನಕ್ಕು ಸಾಕಗಿತು . ಉದಾಹರಣೆಗೆ " ಸಂದೇಶ್ ಶ್ ಶ್ ..., ಪ್ರಕಾರ್ ರ್ ರ್ " ಹಹ್ಹಹ
ಹಾಸ್ಯದ ಮೂಲಕ ತಪ್ಪನ್ನ ಸರಿ ಪಡಿಸೋ ನಿಮ್ಮ ಶೈಲಿ ತುಂಬಾ ಚೆನ್ನಾಗಿದೆ . ಇನ್ನುಮೇಲೆ ವ್ಯಂಜಗಳ ಜೊತೆ ಕುರುಕಲು ಸ್ವರ ಸೇರಿಸೋದು ಮರೆಯೋಲ್ಲ ..ತುಂಬಾ ತುಂಬಾ ನೆ ಧನ್ಯವಾದ .
@ಶಿವೂ ಸರ್
ನೀವು ತುಂಬಾ ಇಂತ ಸಂಗತಿಗಳನ್ನ ಹತ್ತಿರದಿಂದ ನೋಡಿದ್ದೀರಾ ಅನ್ನಿಸುತ್ತೆ . ಅದಕ್ಕೆ ಸರಿಯಾಗಿ ನಿಮ್ಮ ಕೈಲಾದ ಸಹಾಯ ಮಾಡಿ ಅವರನ್ನ ಒಂದು ಗುರಿ ಕಡೆ ತಿರುಗಿಸಿದ್ದಿರ ಅದು ಸಂತೋಷದ ವಿಷಯ . ರವಿ ಬೆಳೆಗೆರೆ ಅವರ ತುಂಬಾ ಬರಹಗಳು ಸುಮಾರು ಜನರಿಗೆ ಸಹಾಯವಾಗಿವೆ , ತುಂಬಾ ಧನಾತ್ಮಕ ಯೋಚನೆ ಅವರದು .
@ ಸೀತಾರಾಮ ಸರ್ ,
ನಿಮ್ಮ ಹರಕೆಗೆ ಧನ್ಯವಾದಗಳು . ಹೀಗೆ ಬರ್ತಾ ಇರಿ
@ ಪ್ರಕಾಶಣ್ಣ
"ಹೌ ಟು ಸೆ .."ನೋ" ಅನ್ನೋ ಬುಕ್ ಇದೆಯಾ ? ನನ್ನ ಪತಿಗೆ ಖಂಡಿತ ನಾನು ತಂದು ಕೊಡಬೇಕು . ಅವರು ನೋ ಅನ್ನೋಕೆ ಆಗದೆ ಕೆಲವೊಂದು ಸಲ ತುಂಬಾ ಒದ್ದಾಡುತ್ತಾರೆ , ನೋ ಅನ್ನದೆ ಸುಮಾರು ಸಲ ಕಷ್ಟ ನು ಅನುಭವಿಸಿದ್ದಾರೆ .
ನಿಮ್ಮ ಪ್ರತಿಕ್ರಿಯೆಗೆ ಧನವಾದಗಳು
ಮನಸಾರೆ
ಮನಸಾರೆ ಅವರಿಗೆ ನಮಸ್ಕಾರಗಳು .ಈ ದಿನ ನಿಮ್ಮ ಬ್ಲಾಗಿನ ಫಾಲೋಯರ್ ಆಗಿದ್ದೇನೆ .ರವಿಯವರ ಬಾಟಮ್ ಐಟಂ ಮತ್ತುಖಾಸ್ ಬಾತ್ ನ
ReplyDeleteಎಲ್ಲಾ ಪುಸ್ತಕಗಳನ್ನೂ ಓದಿದ್ದೇನೆ .ನೀವು ಕತೆಗಾರ್ತಿ ನೇಮಿಚಂದ್ರ ಅವರ 'ಬದುಕು ಬದಲಿಸ ಬಹುದು 'ಮತ್ತು ಅವರ 'ನೇಮಿಚಂದ್ರರ ಸಮಗ್ರ ಕತೆ ಗಳು 'ಕೃತಿಗಳನ್ನು ಓದಿ.ಇಷ್ಟವಾಗಬಹುದು.ಧನ್ಯವಾದಗಳು .
tumba uttama baraha..
ReplyDeletebiduvinallomme beti kodi
www.vanishrihs.blogspot.com
next post yaavaaga........... elliddeeri....... how are you.......... bega barali mundina baraha.....
ReplyDeletechennaagide! matte bareyiri ?
ReplyDelete