Monday, February 1, 2010

ಅವಳು ಹೀಗೆ ಮಾಡಿದ್ದು ಸರೀನಾ ?

ಕೆಲವೊಮ್ಮೆ ನಮ್ಮ ಮನಸ್ಸಿನ ಸ್ಮೃತಿ ಪಟಲದ ಮೇಲೇ ತುಂಬಾ ವರ್ಷದ ಹಿಂದೆ ನಡೆದ ಘಟನೆಗಳು ಥಟ್ಟನೆ ನೆನಪಾಗಿ ಬೀಡುತ್ತವೆ ,ಹಾಗೆಯೇ ನಮ್ಮನ್ನ ತುಂಬಾ ಕಾಡ್ತಾನು ಇರ್ತಾವೆ . ನಂಗೆ ನನ್ನ ಬಾಲ್ಯದ ಗೆಳತಿಯರ ಜೊತೆ ಆಡಿ ಪಾಡಿ ಬೆಳೆಯುವಾಗ ನಡೆದ ಅನೇಕ ಘಟನೆಗಳು ಹಾಗೆ ಥಟ್ಟನೆ ನೆನಪಾಗಿ ಮಾಯವಾಗಿ ಬೀಡುತ್ತವೆ. ಕೆಲವೊಂದು ಸಲ ನಾ ಹಾಗೇ ಅವಳ ಜೊತೆ ಜಗಳ ಅಡುಬಾರದಗಿತ್ತೇನೋ ಅನ್ನಿಸಿದರೆ , ಮತ್ತೊಂದು ಸಲ ಅವಳೇಕೆ ಹಾಗೇ ಮಾಡಿದಳು ಅಂತ ಮನಸ್ಸು ಕೇಳ್ತಾ ಇರ್ತದೆ . ಮೊನ್ನೇ ನಾನು ಆಫೀಸ್ ನಲ್ಲಿ PMP ( Project Management Professional) ಕೋರ್ಸ್ ಮಾಡಬೇಕು ಅಂತ ನನ್ನ ಮ್ಯಾನೇಜರ್ ಗೆ ಹೇಳ್ತಾ ಇದ್ದೆ . ಅವರು ತುಂಬಾ ಸರಳ ಹಾಗೂ ಯಾವಗಲು ಎಲ್ಲರನ್ನು ಗೌರವದಿಂದ ಮಾತಾಡಿಸೊ ವ್ಯಕ್ತಿ , ಆದ್ರೆ ಅವತ್ಯಕೋ ಸ್ವಲ್ಪ ಫ್ರಾಂಕ್ ಆಗಿ ನಂಗೆ " ನೀವು PIMP ಆಗಬೇಕು ಅಂತ ಅಂದ್ಕೊಡಿದಿರ" ಅಂತ ಚೇಡಿಸಿದಾಗ್ ಯಾಕೋ ನಂಗೆ ತುಂಬಾ ಕಸಿವಿಸಿ ಆಯಿತು. ನನಗ್ಯಾಕೋ ಛೇ ಇವರ ಹತ್ರ ಯಾಕೆ ನಾನು ಕೇಳಿದೆ ಅನ್ನೋವಸ್ತು ಹಿಂಸೆ ನನಗೆ. ನಾನು ಸ್ವಲ್ಪ ಸ್ಟ್ರಿಕ್ಟ್ ಆಗಿ " ನೋಡಿ ಸರ್ ನನಗೆ ಈ ಥರ ಮಾತುಗಳೆಲ್ಲ ಹೀಡಿಸೋಲ್ಲ, ನೀಮಗೆ ಇದೆಲ್ಲ ಚಿಕ್ಕ ಚಿಕ್ಕ ಮಾತಗಿರ್ಬೇಕು ಆದ್ರೆ ನಂಗೆ ಇದು ತುಂಬಾ ದೊಡ್ಡ ವರ್ಡ್ " ಅದಕ್ಕೆ ಅಲ್ಲೇ ಪಕ್ಕದಲ್ಲೇ ಇದ್ದ Sr architect ನನಗೆ " ಹೇಯ್ ಕಮಾನ್ ಇದೆಲ್ಲ ಸಾಫ್ಟ್ವೇರ್ ಇಂಡಸ್ಟ್ರಿ ನಲ್ಲಿರೋ floating ಜೋಕ್ಸ್ " ಅಂದಾಗ್ ನಂಗೆ ಛೇ ಇಲ್ಲಿ ಇರೋರೆಲ್ಲ ಹೀಗೇನ ಅಂದ್ಕೊಂಡು ನನ್ನ ಕ್ಯಾಬಿನ್ ಗೆ ಬಂದು ಕುಳಿತೆ . ಆಗ ನನ್ನ ಮನಸಿನ ಪರದೆ ಮೇಲೆ ನನ್ನ ಬಾಲ್ಯದ ಗೆಳತಿ ಅನ್ನಪೂರ್ಣ ಕರಬನವರ್ ಕಥೆ ಒಂದೊದಾಗಿ ಬಿಚ್ಕೊಳುತ್ತ ಹೋಯ್ತು . ಅನ್ನಿ ನನ್ನ ಬಾಲ್ಯದ ಗೆಳತಿ . ಅವಳನ್ನ ನಾವು ಅನ್ನಿ ಅನ್ನೋದಕಿಂತ ಜಾಸ್ತಿ ಕರ್ಬನವರ ಅಥವಾ ಕರಬಿ ಅನ್ನೋದೇ ಜಾಸ್ತಿ. ನಮ್ಮ ಉತ್ತರ ಕರ್ನಾಟಕ ದಲ್ಲಿ ನಾವು ಹೆಸರಿಗಿಂತಲೂ ಅಡ್ಡ ಹೆಸರನ್ನೇ ಜಾಸ್ತಿ ಉಪಯೋಗಿಸೋದು. ಅದು ಎಸ್ಟರ್ ಮಟ್ಟಿಗೆ ಅಂದ್ರೆ ಒಮ್ಮೆ ನಮ್ಮ ಪತಿದೇವರು ಅವರ ಫ್ರೆಂಡ್ ಶೀಗಿಹಳ್ಳಿ ಮನಿಗೆ ಹೋಗಿದ್ದರು . ಅವರ ತಂದೆ ಅಲ್ಲೇ ಹಾಲ್ ನಲ್ಲಿ ಕುಳಿತು ಕೊಂಡಿದ್ದರು . ಆಗ ನಮ್ಮ ರಾಯರು ಅವರನ್ನ " ಶೀಗ್ಯಾ ಇಲ್ಲೆನ್ರಿ ಮನ್ಯಾಗ್" ಅಂತ ಕೇಳಿದ್ರು . ಆಗ ಅವರು ನಕ್ಕೊಂಡು " ನಾನು ಶೀಗಿಹಳ್ಳಿನೆ , ಬಾ ಒಳಗ ಅವನು ಅದಾನ್ " ಅಂದಾಗ ನಮ್ಮ ಯಜಮಾನ್ರು ಮುಖ ನಾಚಿಕೆಯಿಂದ ಕೆಂಪ ಆಯಿತು. ನಾನು ಹಾಗೆ ನನ್ನ ಪ್ರೀತಿಯ ಗೆಳತಿ ಅನೂ ನ ಕರಬಿ ಅನ್ನೋದೇ ಜಾಸ್ತಿ . ನಾನು ಅವಳು ಒಂದನೇ ಕ್ಲಾಸಿನಿಂದ ಒಟ್ಟಿಗೆ ಓದಿದ್ದು. ನಮ್ಮದೇನು ಅಂತ ಕ್ಲೋಸ್ ಗೆಳೆತನ ಇರ್ಲಿಲ್ಲ ಅದ್ರು ಕೂಡಿ ಆಡಿ ಕಲಿತಿದ್ರಿಂದ ನನ್ನ ಹೃದಯಕ್ಕೆ ಹತ್ತಿರ . ನೀವು ಯೋಚಿಸ್ತಾ ಇರ್ಬೇಕು ಅಲ್ಲಾ " ಕಥೆ ಏನೋ pimp ನಿಂದ ಶುರುವಾಗಿ ಅಡ್ಡ ಹೆಸರಿಗೆ ಬಂದು ಎಲ್ಲೊ ತಿರಗ್ತಾ ಇದೆ ಅಂತ "ಇಲ್ಲ ಎಲ್ಲದಕ್ಕೂ ಸಂಬಂಧ ಇದೆ. ಹೌದು ನನ್ನ ಗೆಳತಿ ಪ್ರಾಣ ಕೊಟ್ಟಿದ್ದು ಈ ಪಿಂಪ್ಗಳಿಂದ ಅಂದ್ರೆ ಈ ಹೆಣ್ಣು ವ್ಯಾಪಾರ ಮಾಡುವ ದಲ್ಲಾಳಿಗಳಿಂದ .ನಾನು ಅವಳು ಏಳನೆಯ ತರಗತಿವರೆಗೆ ಓದಿದ್ದು ಕನ್ನಡ ಹೆಣ್ಣು ಮಕ್ಕಳ ನಂಬರ್ ಶಾಲೆ ಯಲ್ಲಿ . ಅವಾಗ್ ನಮ್ಮೂರಿನಲ್ಲಿ ಕಾನ್ವೆಂಟ್ ಶಾಲೆಗಲಿರಲಿಲ್ಲಾ , ಇದ್ರೂ ನಮ್ಮನ ಅಲ್ಲಿ ಹಾಕ್ತಿರ್ಲಿವೇನೋ .. ಎಲ್ಲ ಜಾತಿಯ , ಎಲ್ಲ ವರ್ಗಗಳ ಮಕ್ಕಳು ಸರ್ಕಾರೀ ಶಾಲೆಗಳಿಗೆ ಹೋಗ್ಬೇಕು . ನಾನು ಹಾಗೂ ಅವಳು ಮತ್ತು ಇನ್ನು ಸುಮಾರು ಜನ ಗೆಳತಿಯರು ಪ್ರೈಮರಿ ಸ್ಕೂಲ್ ಕನ್ನಡ ಹೆಣ್ಣು ಮಕ್ಕಳ ಸರ್ಕಾರೀ ಶಾಲೆಯಲ್ಲಿ ಮುಗಿಸಿ , ಹಾಯ್ಸ್ಕೂಲ್ ಗೆ ( ಪ್ರೌಡಶಾಲೆಗೆ ) ಬೇರೆ ಶಾಲೆ ಸೇರಿಕೊಂಡ್ವಿ .ನಮ್ಗೆ ಬಾಲ್ಯ ಕಳೆದು ಪ್ರೌಡವಸ್ಥೆಗೆ ಕಾಲಿಡ್ತಾ ಇದ್ದಿವಿ ಅಂತ ಆ ಹೊಸದಾಗಿ ಸೇರಿಕೊಂಡ ನಮ್ಮ ಪ್ರೌದಶಾಲೆಗಿಂತಲೂ ಆ ಕರಬಿ ಸಾವು ಸಾರಿ ಸಾರಿ ಹೇಳ್ತಾ ಇತ್ತು . ಯಾಕೆಂದರೆ ಪ್ರೌಡಶಾಲೆಗೆ ಸೇರಿಕೊಂಡ ಕೆಲೆವೆ ದಿನಗಳಲ್ಲೇ ಅಲ್ವೇ ಅವಳು ನಮ್ಮನ ಬಿಟ್ಟು ದೂರದ ಬಾರದ ಲೋಕಕೆ ಹೋಗಿದ್ದು.ಅವರ ಮನೆ ಸ್ಲಂ ಥರ ಇರೋ ಏರಿಯಾದಲ್ಲಿ ಇತ್ತು. ನಾನು ಸುಮಾರು ಸಲ ಅವಳನ್ನ ಕರಿಲಿಕ್ಕೆ ಅಲ್ಲಿ ಹೋಗಿದ್ದೆ. ಅದ್ಯಾಕೋ ಕೆಲವೊಂದ್ ಸಲ ಅಲ್ಲಿ ಹೋಗೋಕೆ ಹಿಂಸೆ . ಅವರಮ್ಮ ತುಂಬಾ ಸಾದ್ವಿ , ಪಾಪದವರು. ನಾನು ಹೋದಾಗೊಮ್ಮೆ ಏನಾದ್ರು ಕೆಲಸ ಮಾಡ್ತಾನೆ ಇರ್ತಿದ್ರು . ಅವರ ಮನೆ ಕಸಬು ಕೌದಿ ( ಹಳೆ ಅರಿವೆಗಳಿಂದ ಹೊಲೆದ ಹೊದ್ದಿಗೆ ) ಹೊಲಿಯೋವದು , ಇಲ್ಲ ಅಂದ್ರೆ ಕಸಬರಿಗೆ ಕಟ್ಟೋದು , ಅದು ಇಲ್ಲ ಅಂದ್ರೆ ಇನ್ನು ಏನೋ ಅದೇ ಥರ ಮಾಡೋದು. ಅವರ ಅಪ್ಪ ಕೂಲಿ ಮಾಡ್ತಾ ಇದ್ರು , ಅವರನ್ನ ಸುಮಾರು ಸಲ ಅವರ ಮನೆಯ ಕಟ್ಟೆಯ ಮೇಲೆ ಕುಡಿದು ಮಲಗಿದ್ದು ನೋಡಿದ್ದೀನಿ. ಅವಾಗ್ ಅಲ್ಲಿಂದ ಅವಳನ್ನು ಕರಿಯದೆ ಓಡಿ ವಾಪಸ್ಸು ಬಂದಿದ್ದು ನೆನಪಿದೆ . ಆಗ್ ಅವರ ಮನೆ ಹತ್ರ ಇದ್ದಿದ್ದೆ ಈ ರೆಡ್ ಲೈಟ್ ಏರಿಯ. ಅವಳನ್ನ ಕರಿಲಿಕ್ಕೆ , ಅವಳ ಜೊತೆ ಆಡಲಿಕ್ಕೆ ಅಲ್ಲಿ ಯಾಕೆ ಹೋಗ್ತಿಯ ಅಂತ ನಮ್ಮ ಮನೇಲಿ ನಮ್ಮ ಮಾಮನ ಹತ್ರ ಸುಮಾರು ಸಲ ಬೈಸ್ಕೊಂಡಿದ್ದು ನೆನಪು . ಅವಾಗ್ ಅರ್ಥ ಆಗ್ತಿರ್ಲಿಲ್ಲ ಅಂತೇನಿಲ್ಲ , ಅವರು ಯಾಕೆ ಬೈಯ್ತಾರೆ ಅಂತ ಅರ್ಥ ಆಗ್ತಿತ್ತು. ಅದ್ರು ಗೆಳತಿಯರು ಆಟ ಆಡಲಿಕ್ಕೆ ಗುಂಪು ಮಾಡಿದ್ರೆ ಕರಬಿ ಇರಲೇ ಬೇಕು.ಅವರ ಮನೆ ಹತ್ರನೇ ಆಟದ ಮೈದಾನ್ ಇದ್ದಿದ್ರಿಂದ ಸುಮಾರು ಸಲ ದಣಿವಾದಗ್ ನೀರು ಕುಡಿಲಿಕ್ಕೆ ನಮ್ಮೆಲ್ಲರ ಠೀಕಾನಿ ಅಲ್ಲೇ .ಆದ್ರೆ ಕೆಲವೊಂದು ಸಲ ಅವಳಿಗೆ ಅದ್ಯಾಕೋ ನಮ್ಮನ ಅವರ ಮನೆಗೆ ಕರೆದುಕೊಂಡು ಹೋಗೋಕೆ ಇಷ್ಟ ಇರ್ತಿರ್ಲಿಲ್ಲ .ಆಮೇಲೆ ಆಮೇಲೆ ಯಾಕೋ ಏನೋ ನಾನು ಅವಳ ಮನೆ ಹತ್ರ ಹೋಗೋದು ಕಡಿಮೆ ಮಾಡಿದೆ. ಅವಳು ನಂಗೆ ಅಷ್ಟೇನು ಕ್ಲೋಸ್ ಫ್ರೆಂಡ್ ಆಗಿರಲಿಲ್ಲ. ಹಾಯ್ಸ್ಕೂಲ್ ಸೇರಿ ಒಂದೆರಡು ತಿಂಗಳು ಆಗಿರಬಹುದು ಏನೋ . ನಮಗೆಲ್ಲ ಆ ದೊಡ್ಡ ದೊಡ್ಡ ಹೊರೆಯಂತ ಪಾಟಿಚೀಲ ( ಸ್ಕೂಲ್ ಬ್ಯಾಗ್ ) ಬಿಟ್ಟು ಹಾಯ್ಸ್ಕೂಲ್ ಹುಡಗಿರ ಥರ ಬರಿ ನಾಲ್ಕು ಪುಸ್ತಕ ಕೈಯಲ್ಲಿ ಕೈಯಲ್ಲಿ ಹಿಡ್ಕೊಂಡು ಹೊಗೊದಂದ್ರೆ ಅದೇನೋ ಥ್ರಿಲ್ , ಖುಷಿ . ಅದರ ಮೇಲೆ ಹಾಯ್ಸ್ಕೂಲ್ ಹೋಗ್ತಾ ಇದ್ದಿವಿ ಅಂದ್ರೇನೆ ನಾವೆಲ್ಲಾ ಹರೆಯಕ್ಕೆ ಕಾಲಿಡ್ತಾ ಇದ್ದೀವಿ ಅಂತ ಅರ್ಥ , ಅದೇ ಏನೋ ಒಂಥರಾ ಸೊಗಸು. ನಮ್ಮ ಈ ಹೊಸ ಹೊಸ ಅನುಭವಗಳನ್ನ ಅನುಭವಿಸೋದ್ರಲ್ಲಿ ಎಷ್ಟು ಬ್ಯುಸಿ ಆಗಿದ್ವಿ ಅಂದ್ರೆ ನಮ್ಮ ಜೊತೇಲೆ ಓದ್ತಾ ಇರೋ ನಮ್ಮ ಗೆಳತಿ ಅದೇ ಯೌವನವಸ್ಥೆಯಿಂದ ನರಕಯಾತನೆ ಅನುಭವಿಸ್ತಾ ಇದ್ದಾಳೆ ಅಂತಾನೆ ಗೊತ್ತಾಗಲಿಲ್ಲ . ಅವೊತ್ತೊಂದಿನ ಆ ಸುದ್ದಿ ಬರಸಿಡಿಲಿನಂತೆ ಬಂದು ಬಡಿದಾಗ್ ನಾವೆಲ್ಲ ಒಂದು ಕ್ಷಣ ಥರ ಥರ ನಡಿಗಿದ್ವಿ . ನಮ್ಮ ಶಾಲೆಯ ಕನ್ನಡ ಟೀಚರ್ ಪೇಪರ್ ಹಿಡ್ಕೊಂಡು ನಮ್ಮ ಕ್ಲಾಸಿಗೆ ಬಂದಾಗ್ ಅದು ಎನು ಅಂತ ಎಲ್ಲರಿಗೂ ಕೂತೂಹಲ . ಅವರು ತುಂಬಾನೆ ಫೀಲ್ ಮಾಡ್ಕೊಂಡಿರೋ ಹಾಗೆ ಕಾಣಿಸ್ತಾ ಇತ್ತು . ಅವರು ಪೇಪರ್ ಹಿಡ್ದು ಮೊದ್ಲು ಹೇಳಿದ್ದು " ಈ ಪೇಪರನಲ್ಲಿ ಸುದ್ದಿ ಬಂದಿದೆ , ನಮ್ಮ ನಿಮ್ಮೆಲ್ಲರ ಆತ್ಮಿಯ ಗೆಳತಿ ಅನ್ನಪೂರ್ಣ ಕರ್ಬನ್ನವರ್ ನಮ್ಮನ ಬಿಟ್ಟು ಹೊರಟು ಹೋದಳು. ಅವಳು ಆತ್ಮಹತ್ಯೆ ಮಾಡಿಕೊಂಡಿದಾಳೆ " ಅಂದಾಗ್ ನನ್ನ ಎದೆ ಒಡದೆ ಹೋಯ್ತು ಅನ್ನೋವಸ್ಟು ನೋವಾಯ್ತು , ತೀವ್ರ ಶಾಕ್ ಆಯಿತು . ಏನ್ ಕೇಳ್ತಾ ಇದ್ದೀನಿ ಅಂತಾನೆ ನಂಬೋಕೆ ಆಗಲಿಲ್ಲ . ಈ ಸದ್ಯ ನಾನು ಇದನ್ನ ಬರಿಬೇಕಾದ್ರೆ ನಂಗೆ ಅದೇ ಥರ ಎದೆ ಡವ್ ಡವ್ ಅಂತ ಹೊಡ್ಕೊಳ್ತಾ ಇದೆ. ಅವರು ವಿವರಿಸಿದ ಪ್ರಕಾರ ಅವಳ್ಳನ್ನ ದೇವದಾಸಿ ಆಗೋಕೆ ಒತ್ತಾಯ ಮಾಡಿದರಂತೆ . ಅವಳು ಅದಕ್ಕೆ ಸುಮಾರು ದಿನ ಖಂಡಿಸಿ ಜಗಳಾದ್ಲು ಅಂತೆ . ಆಮೇಲೆ ಓಣಿಯ ಹಿರಿಯರು ಅಂದ್ರೆ ಪಿಂಪ್ಗಳೇ ಇರ್ಬೇಕು ಅವರ ಅಪ್ಪ, ಅಮ್ಮನ ಮೇಲೆ ಒತ್ತಾಯ ಹೇರಿ ದೇವದಾಸಿ ಮುತ್ತು ಕಟ್ಟೋಕೆ ರೆಡಿನು ಮಾಡಿಸಿದರಂತೆ . ಅಮೆಲೇನೆ ಅವಳು ಈ ಥರ ಅತ್ಮಹತ್ಯೇ ಮಾಡಿಕೊಂಡಿದ್ದು ಅಂತೆ . ಒಂದು ಕ್ಷಣ ನಾವೆಲ್ಲರೂ ಮೂಕವೇದನೆ ಅನಿಭವಿಸಿದ್ವಿ ನೋಡಿ ಅದನ್ನ್ ಹೇಳೊಕೆ ಅಗೋಲ್ಲಾ . ನಂಗೆ ನನ್ನ ಜೀವನದಲ್ಲಿ ಮೊದಲ ಬಾರಿಗೆ ಅಸಾಯಕತೆ ಫೀಲ್ ಆಯಿತು. ನಮ್ಮ ಟೀಚರ್ ಕೊನೆಗೊಂದು ಮಾತು ಹೇಳಿದ್ರು , ಅದು ಏನಂದ್ರೆ " ಅವಳು ಆ ಥರ ಜೀವನ ಮಾಡೋದ್ ಕಿಂತ್ಲು , ಅವಳು ಈ ಥರ ಅತ್ಮಹತ್ಯೇ ಮಾಡಿ ಕೊಂಡಿದ್ದು ಒಳ್ಳೆಯದೇ ಆಯಿತು " . ನನಗ್ಯಾಕೋ ಅವರು ಆ ಥರ ಹೇಳಬಾರದಾಗಿತ್ತೇನೋ ಅಂತ ಇಂದಿಗೂ ಅನ್ನಿಸ್ತಾ ಇರ್ತದೆ . ಅದನ್ನ ಬಿಟ್ಟು ನಮಗೆಲ್ಲ " ಅವಳು ಇಷ್ಟಕ್ಕೆಲ್ಲ ತನ್ನ ಜೀವ ಕೊಡದೆ ಫೈಟ್ ಮಾಡಬೇಕಿತ್ತು, ಇಲ್ಲ ನಮ್ಮ ಹತ್ರ ಬರಬೇಕಿತ್ತು " ಅಂತ ಹೇಳಿದ್ರೆ ನಮಗೆ ಜೀವನದ್ದಲಿ ಕಷ್ಟ ಬಂದ್ರೆ ಹೆದರಿ ಜೀವ ಕೊಡದೆ ಫೈಟ್ ಮಾಡಬೇಕು ಅಂತ ದೈರ್ಯ ಕೊಟ್ಟಂಗೆ ಇರ್ತಿತ್ತೇನೋ . ಅದ್ರು ನಂಗೆ ಇನ್ನು ಅನ್ನಿಸುತ್ತೆ " ಅವಳು ಹೀಗೆ ಮಾಡಿದ್ದು ಸರೀನಾ ?" .ಯಾರಿಗೊತ್ತು ಹದಿಮೂರು ವರ್ಷದ ಹುಡುಗಿಗೆ ಅದನ್ನು ಬಿಟ್ಟು ಬೇರೆ ದಾರಿ ಇಲ್ಲ ಅನ್ನಿಸಿರಬೇಕು ಅಲ್ವಾ ?

17 comments:

  1. nimma gelathiya bagge thilidu bahala dukkavayithu.

    ReplyDelete
  2. Nisha first I would like to thank you for visiting my blog and sparing time on my post. You are the one who commented first on my blog , so you deserve always special place.
    Yeah that was really painful incident occurred in my life and It is still so fresh in my mind.

    ReplyDelete
  3. 'Manasaaree' ಅವರೇ..,

    ನೀವು ಚೆನ್ನಾಗಿಯೇ ಬರೆಯುವಿರಿ..ಆದರೆ ನಿಮ್ಮ ಬರಹದಲ್ಲಿ ಬಹಳಷ್ಟು ಪದಗಳು ತಪ್ಪಾಗಿವೆ, ನನಗನಿಸುತ್ತದೆ ನಿಮಗೆ ಅಷ್ಟಾಗಿ ಕನ್ನಡ ಬರುವುದಿಲ್ಲವೆಂದು. ನೀವು ಆಂಗ್ಲದಲ್ಲೇ ಬರೆಯಿರಿ ಪರವಾಗಿಲ್ಲ..

    ಮೊದಲು 'manasaaree' ಬದಲಾಗಿ 'manasaare' ಹಾಕಿ..

    ನನ್ನ 'ಮನಸಿನಮನೆ'ಗೆ...:http//manasinamane.blogspot.com

    ReplyDelete
  4. guru dese avare ,

    Neevu heliddu noorakke nooru satya. Kannada tappugalu bahalastu ive, Adu nangu gottu. Adre ee kannada translation upyog maduvadu swalpa kasta agta ide . Yest prayathna pattaru sariyaad shabda type madalu baruttilla. Konege sotu adege translate madutto madali , adre naa helabekagirudu nimage muttidare saaku antha , naanu barita hode namm kannada translation adanna tappu tappu shabdagalanne geechutta hoytu .Nange translation jothe guddadi sakagittu mattu nimm munde ee post idbeku annova athur jasti. Nodi Nann prakar language kinthlu adaralliro bhavane odugarige muttidare saaku nodi .
    Matte Manasaaree yaakandre , idu anthrjal yella valle shabdagalu bega mugidu hoguttave . Nangu agiddu ade nange manasaare ne bekagittu adre " Manasaare" available irlilla . Adakke swalpa change maadi " Manasaaree" antha itkonde.

    ReplyDelete
  5. ಮನಸಾರೆ
    ನನ್ನ ಬ್ಲಾಗ್ ಗೆ ಬಂದು ಸ್ಪೇನ್ ಪ್ರವಾಸ ಕಥನದ ಬಗ್ಗೆ ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್,
    ಗೆಳತಿಯ ಬಗೆಗೆ ಕೇಳಿ ಬೇಸರವಾಯಿತು
    ನಿಮ್ಮ ಸರಳ ಶೈಲಿ ತುಂಬಾ ಒಪ್ಪುತ್ತದೆ
    ''ಮನಸಾರೆ'' ಹೇಳುವ ನಿಮ್ಮ ಶೈಲಿ ಹೀಗೆಯೇ ಮುಂದುವರೆಯಲಿ
    ಬಹಳಷ್ಟು ಕನ್ನಡ ದೋಷಗಳಿವೆ
    Google Indic Transleterian ತುಂಬಾ ಚೆನ್ನಾಗಿದೆ
    ನಿಮಗೆ ಅದರ ಬಗೆಗೆ, Use ಮಾಡಲು ಕಷ್ಟವಾದರೆ ನನ್ನನ್ನು ಕೇಳಿ, ನಾನು ಹೇಳುತ್ತೇನೆ,
    my mail id: murthyhegde@gmail.com

    Keep going

    ReplyDelete
  6. ಇಂಚರ ಅವರೇ ನೋಡಿ ನಾನು ಆಗಲೇ ನಿಮ್ಮ ಸಲಹೆ ಮೇರೆಗೆ ಗೂಗಲ್ ಪರಿವರ್ತನ ಟೂಲ್ ಉಪಯೋಗ ಮಾಡೋದು ಕಲಿಲಿಕ್ಕೆ ಶುರು ಮಾಡಿದೆ . ತುಂಬಾ ಒಳ್ಳೆ ಸಾಫ್ಟ್ವೇರ್ ಕಣ್ರೀ .
    ತುಂಬಾ ತುಂಬಾನೇ ಧನ್ಯವಾದಗಳು .

    ReplyDelete
  7. ಮನಸಾರೆ ನಿಮ್ಮ ಲೇಖನವನ್ನ ಮೆಚ್ಚಿದೆ...ಹಸಿ ವಯಸಿನಲ್ಲಿ ಹಳ್ಳಿಗಾಡಿನಲ್ಲಿ ಏನೂ ಅರಿಯದ ಬಡವ ಮುಗ್ಧ ತಂದೆ-ತಾಯಿಯ ಅಸಹಾಯಕ ಸ್ಥಿತಿಯಲ್ಲಿ ನಿಮ್ಮ ಗೆಳತಿಯ ಆಗಿನ ನಿರ್ಧಾರ ಅನಿವಾರ್ಯವಾಗಿತ್ತೇನೋ...? ನಿಜ ನೀವು ಹೇಳಿದಂತೆ..ಧೈರ್ಯಕೊಡುವ ಒಂದೇ ಸಾಧ್ಯತೆಯನ್ನು ನಿಮ್ಮ ಸ್ಕೂಲ್ ಮಾಸ್ಟರ್ ಮಾಡಬಹುದಿತ್ತು...ಆದ್ರೆ ನಿಮ್ಮ so called educated...ಅಧಿಕಾರಿಗಳು ಉಡಾಫೆಯಲ್ಲಿ ಗಂಭೀರಮಾತನ್ನು ತೇಲಿಬಿಟ್ತದ್ದು ಹೆಣ್ಣೆಂಬ ಉದಾಸೀನದಿಂದಲೋ ಎನಿಸುತ್ತೆ..ತಮಾಶೆ ಯಾವುದು..ಗಂಭೀರ ಪರಿಸ್ಥಿತಿ ಎಂತಹುದು ಎನ್ನುವ common sense ಇಲ್ಲದಿದ್ದರೆ...officer ಎನಿಸಿಕೊಳ್ಳಲೂ ಅನರ್ಹರು..ಎಂದೇ ನನ್ನ ಭಾವನೆ,

    ReplyDelete
  8. ಜಲನಯನ ಸಾರ್ , ನನ್ನ ಲೇಖನ ಓದಿ ಅದನ್ನ ಮೆಚ್ಚಿದಕ್ಕೆ ತುಂಬ ಧನ್ಯವಾದಗಳು. ನೀವು ನನ್ನ ಲೇಖನವನ್ನ ಆ ನಾಲ್ಕು ಸಾಲುಗಳ ಕಾಮೆಂಟಿನಲ್ಲಿ ಎಸ್ಟು ಚೆನ್ನಾಗಿ ವಿಮರ್ಶಿಸಿದ್ದಿರಾ. ಯಾರಿಗಾದ್ರು ನನ್ನ ಪೂರ್ತಿ ಲೇಖನ ಓದಲಿಕ್ಕೆ ಸಮಯ ಇಲ್ಲಾ ಅಂದ್ರೆ ನಿಮ್ಮ್ ಕಾಮೆಂಟ್ ಓದಿದ್ರೆ ಸಾಕು ನೋಡಿ ನಾನು ಎನು ಹೇಳಬೇಕು ಅಂದ್ಕೊಡಿದಿನೊ ಅದು ಅವರಿಗೆ ಅರ್ಥ ಅಗುತ್ತೆ.
    ಮತ್ತೊಮ್ಮೆ ನಿಮ್ಗೆ ನನ್ನ ಹ್ರದಯಪೂರ್ವಕ ಧನ್ಯವಾದಗಳು.

    ReplyDelete
  9. Chennaagide.. Odi besaravaayitu..

    ReplyDelete
  10. ರ‍ವಿಕಾಂತ ಅವರೇ , ಧನ್ಯವಾದಗಳು.

    ReplyDelete
  11. I was very much moved. There are so many unfortunate children...some get through and some don't...

    Don't stop writing in Kannada. You write well. Keep writing.

    ReplyDelete
  12. ಭಾಗವತ ಅವರೇ , ತುಂಬಾ ಧನ್ಯವಾದಗಳುರೀ . ನನ್ನ ಪೋಸ್ಟ್ ಓದಿ ಇನ್ನು ಬರೀರಿ ಅಂತ ಪ್ರೋತಸಿಹಿಸಿದಕ್ಕೆ ತುಂಬಾ ತುಂಬಾ ನೆ ಥ್ಯಾಂಕ್ಸ್ ರೀ.
    ನಿಜವಾಗ್ಲೂ ಇನ್ನು ಬರೀಬೇಕು ಅಂತ ಅನ್ನಿಸೋದು ನಿಮ್ಮಂಥವರು ಪ್ರೋತ್ಸಹದಿಂದನೆ .

    ReplyDelete
  13. ನಿಮ್ಮ ಗೆಳತಿಯ ಬಗ್ಗೆ ಓದಿ ಬೇಸರವಾಯಿತು.
    ನೀವು http://www.kannadaslate.com/ ನಲ್ಲಿ ಕೂಡಾ ಕನ್ನಡದಲ್ಲಿ ಬರೆಯಬಹುದು. ತುಂಬಾ ಸುಲಭ ಇದು

    ReplyDelete
  14. ದೀಪಾಸ್ಮಿತಾ,
    ನನ್ನ ಪೊಸ್ಟ್ ಓದಿದಕ್ಕೆ ತುಂಬಾ ಧನ್ಯವಾದಗಳು. kannadaslate.com ತಂಬಾ ಚೆನ್ನಾಗಿದೆ ಇ ಕಾಮೆಂಟ್ ನಾನು ಅದರಲ್ಲೆ ಬರಿದಿದ್ದು.
    ತುಂಬಾ ಇಸ್ಟವಾದುದು ಅಂದ್ರೆ ಅದರ ಟೈಟಲ್ " ಸ್ಲೇಟು , ಗೀಚೋಕೆ ಬಳಪ, ಒರ್ಸೋಕೆ ನಿಮ್ ಎಂಜ್ಲು" .

    ReplyDelete
  15. ತುಂಬಾ ಧುಖದ ಲೇಖನ.... ಬಡತನ ನಮ್ಮನ್ನು ಏನೆಲ್ಲಾ ಮಾಡಿಸತ್ತೆ, ಜನರ ನಂಬಿಕೆಗಳು ಹೀಗೆ ಮಾಡಿಸುತ್ತಾ ಇರತ್ತೆ.... ನೀವು ಹೇಳಿದ ಹಾಗೆ ಓದಿದ ದೊಡ್ಡ ಜನನಕ್ಕೆ ಕೆಲವೊಂದು ಪದ ಅವರಿಗೆ ಬರೀ ಪದ ಅಷ್ಟೇ....... ಆದರೆ ಅದು ಕೆಲವೊಮ್ಮೆ ಎಲ್ಲೋ ನೋವಿನ ಕದ ತಟ್ಟುತ್ತಿರುತ್ತೆ... ತುಂಬಾ ಚೆನ್ನಾಗಿದೆ ನೀವು ಬರೆದ ರೀತಿ... ಮನ ಮುಟ್ಟಿತು.... ನಿಮ್ಮ ಗೆಳತಿಯ ಆತ್ಮಕ್ಕೆ ಶಾಂತಿ ಸಿಗಲಿ.... ಆ ದರಿದ್ರ ಪದ್ಧತಿ ಎಂದೆದಿಗೂತೊಲಗಲಿ.....

    ReplyDelete
  16. ದಿನಕರ ಅವರೇ , ನಿಜ ಈ ಕೆಟ್ಟ ಪದ್ಧತಿ ಇನ್ನು ಎಸ್ಟೋ ಹೆಣ್ಣುಮಕ್ಕಳ ಜೀವನ ಹಾಳು ಮಾಡಿದಿಯೋ ಏನೋ . ನಿಜವಾಗ್ಲೂ ಇದು ತೊರೆದು ಅವರೆಲ್ಲರ ಜೀವನ ನಮ್ಮ ನಿಮ್ಮಂತೆ ಹಸನಾಗಲಿ .
    ನಮ್ಮ ಪೋಸ್ಟ್ ಓದಿ ನಿಮ್ಮ ಅನಿಸಿಕೆಯನ್ನ ಹೇಳಿದಕ್ಕೆ ಹಾಗು ಇನ್ನು ಬರಿಯುವ ಹಾಗೆ ಪ್ರೋತ್ಸಹಿಸಿದಕ್ಕೆ ಧನ್ಯವಾದಗಳು ರೀ

    ReplyDelete