Saturday, March 13, 2010

ಈ ಚುಟುಕು ನಿನಗಾಗಿ

ಮೊದಲ ಬಾರಿ ಚುಟುಕು ಕವಿತೆ ಬರಿಯೋಕೆ ಟ್ರೈ ಮಾಡಿ ನಿಮ್ಮ ಮುಂದೆ ಇಟ್ಟಿದಿನಿ . ನೀವೇ ಹೇಳಿ ಹೇಗಿದೆ ಅಂತ .
ನನ್ನ ಎಲ್ಲ ಕಾಟ , ಹಟಮಾರಿತನ್, ಜಗಳ ಸಹಿಸಿಕೊಂಡು ಅದಕ್ಕೆ ಪ್ರತಿಯಾಗಿ ಬರಿ ಪ್ರೀತಿ, ಪ್ರೀತಿ , ಪ್ರಿತಿಯನ್ನೇ ಕೊಡುವ ನನ್ನವರಿಗಾಗಿ ಈ ಚುಟುಕು.


ಜೀವನದಲ್ಲಿ ಕಷ್ಟ ಸುಖಗಳು ಸಮಪಾಲು ಅಂತಾರೆ
ಅದಕ್ಕೇನೋ ದೇವರು ನನ್ನ ಕಷ್ಟಗಳನ್ನು
ಸಮದೂಗಿಸಲು ನಿನ್ನನ್ನು ನನ್ನ ಹತ್ತಿರ ಕಳುಹಿಸಿದ

ನನ್ನ ಕಣ್ಣಿರು ಒರೆಸಲು ಸೋಲದೆ ಸದಾ
ಸಿದ್ದವಾಗಿರೋ ನಿನ್ನ ಕೈಗಳನ್ನ ನೋಡಿಯೇ ಇರಬೇಕು
ನನ್ನ ಕಣ್ಣಿರಿಗೆ ಕಾರಣವಾದ ಕಷ್ಟ ದುಖಗಳು ಸೋತು ಓಡಿ ಹೋಗಿವೆ

ಜೀವಕ್ಕೆ ಜೀವಾದೆ ಉಸಿರಿಗೆ ಉಸಿರಾದೆ
ಆಸರಿಗೆ ಹೆಗಲು ಕೊಟ್ಟೆ
ಕಷ್ಟದಲ್ಲಿ ಭಾಗಿಯಾದೆ
ನಗುವಿಗೆ ನೀ ಕಾರಣವಾದೆ
ಓ ಗೆಳೆಯ ನೀ ನನ್ನ ಜಗವಾದೆ




7 comments:

  1. Nimma anisikegaLannu chennaagi barediddira... Swalpa kavanada reethi bareyabahuditteno ansatte :) (En maddu nanna ketta abhyaasa adu :)) Anyways, neevibbaru heege obbarigobbaru jeevana saagista irodu santasada vishaya.. nimmibbarigu haagu nimma chikka kandammanigu Devaru olled madli :) heege baritha iri.. haage nanna blog kade nu barta iri :)

    ReplyDelete
  2. Yes Ramesh,
    I completely agree with you , it doesnot give poem feeling . But it is my true feelings , I dont know how to write poems , just expressed my feelings in some words.
    Thanks for your visit and wishes to our family . I will visit your blog.

    ReplyDelete
  3. tamma anisike aaptavaagide. tammavara bagge tamma abhimaana nammannu mukarannaagiside. kavana bareda nimagu nimmi0da kavana bareyalu kaaranaraada avarigu namma va0danegalu.

    ReplyDelete
  4. ಸೀತಾರಾಮ ಸರ್,
    ನನ್ನ ಬ್ಲಾಗ್ ಗೆ ಬಂದು ನೀವು ಮನತುಂಬಿ ಹರಿಸಿ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ನೆ ಧನ್ಯವಾದಗಳು . ಇತ್ತೀಚಿನ ದಿನಗಳಂತೂ ಜೀವನದಲ್ಲಿ ಪಡಬಾರದ ನೋವು ಕಷ್ಟಗಳನ್ನ ಅನುಭವಿಸಿದೆ , ಆಗ ನಂಗೆ ದೈರ್ಯ, ಬೆಂಬಲ , ಪ್ರೀತಿ ನೀಡಿ ಕಷ್ಟಗಳನ್ನ ಎದುರಿಸಿ ಜೀವಿಸೋಕೆ ಹುರುದುಂಬಿಸಿದವರೆ ನಮ್ಮವರು . ಅವರಿಲ್ಲದಿದ್ದರೆ ನಂಗೆ ಆದ ಆಘಾತ್ ನೋವುಗಳಿಂದ ಬಹುಶ ನಾನು ಹೊರ ಬರುತ್ತಿರಲಿಲ್ಲ . ಅವರನ್ನ ನನ್ನ ಜೀವನದಲ್ಲಿ ಕೊಟ್ಟ ಒಂದೇ ಕಾರಣಕ್ಕೆ ನಾನು ಇನ್ನು ದೇವರ ಮೇಲೆ ನಂಬಿಕೆ ಇಟ್ಕೊಂದಿನಿ.

    ಹೀಗೆ ಬರ್ತಾ ಇರಿ , ನಾನು ನಿಮ್ಮ ಬ್ಲಾಗ್ ಕಡೆಗೆ ಬರುವೆ

    ಮನಸಾರೆ

    ReplyDelete
  5. 'Manasaare ' ಅವ್ರೆ..,

    ತುಂಬಾ ಆಪ್ತವಾಗಿದೆ..
    ಆರಂಭ ಚೆನ್ನಾಗಿದೆ.. ಮುಂದೆ ಇನ್ನೂ ಚೆನ್ನಾಗಿ ಬರೆಯುವಿರಿ..

    ಕಳೆದ ಬಾರಿ ನನ್ನನ್ನು ತುಂಬಾ ಹೊಗಳಿರುವಿರಿ.. ನಾನು ಕೂಡ ನಿಮ್ಮ ರೀತಿ ಬ್ಲಾಗ್ ಅಸ್ತಿತ್ವಕ್ಕೆ ಹೋರಾಡುತ್ತಿದ್ದೇನೆ,ನಮ್ಮಂತಹವರಿಂದ ನಿಮ್ಮ ಬ್ಲಾಗಲ್ಲ..ನಿಮ್ಮಿಂದ ನಾವು.
    ನಾನು ತುಂಬಾ ಕಿರಿಯ,ಹಾಗೆಲ್ಲ ಹೊಗಳದಿರಿ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com

    ReplyDelete